ಸದ್ಗುರುವಿನ ಪ್ರವಚನ ಕೇಳುವುದರಿಂದ ಜೀವನ ಪಾವನ

5Betageri1
ಮಮದಾಪುರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಅಧಿಕ ಮಾಸದ ನಿಮಿತ್ತ್ತ ಏರ್ಪಡಿಸಿದ್ದ ನಾಲ್ವವಾಡ ಶ್ರೀ ವೀರೇಶ್ವರ ಶರಣರ ಪ್ರವಚನ ಕಾಯಕ್ರಮದಲ್ಲಿ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಡಾ.ಮಹಾಂತ ಸ್ವಾಮೀಜಿ, ಮೌನ ಮಲ್ಲಿಕಾರ್ಜುನ ಶಿವಯೋಗಿ, ನೀಲಕಂಠ ಸ್ವಾಮೀಜಿ,ಪ್ರಭು ಸಾಮೀಜಿ, ಇತರರಿದ್ದರು.
Published on

ಬೆಟಗೇರಿ: ಪುರಾಣ, ಪ್ರವಚನ ಕೇಳುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಅನಂತಪುರದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ಸಮೀಪದ ಮಮದಾಪುರ ಗ್ರಾಮದ ಮೌನಮಲ್ಲಿಕಾರ್ಜುನ ಮಠದಲ್ಲಿ ಶ್ರಾವಣ ಅಧಿಕ ಮಾಸದ ನಿಮಿತ್ತ್ತ ಭಾನುವಾರ ಏರ್ಪಡಿಸಿದ್ದ ನಾಲ್ವವಾಡ ಶ್ರೀ ವೀರೇಶ್ವರ ಶರಣರ ಮಹಾಪುರಾಣ ಪ್ರವಚನ ಕಾಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ಜಡೆ ಸಂಸ್ಥಾನಮಠದ ಡಾ.ಮಹಾಂತ ಸ್ವಾಮೀಜಿ, ಮಮದಾಪುರದ ಮೌನ ಮಲ್ಲಿಕಾರ್ಜುನ ಶಿವಯೋಗಿ, ಗುತ್ತಲ ಕಲ್ಮಠದ ಪ್ರಭು ಸಾಮೀಜಿ, ಹಾರನಹಳ್ಳಿ ಚೌಕಿಮಠದ ನೀಲಕಂಠ ಸ್ವಾಮೀಜಿ, ಶಲವಡಿ ಗುರುಶಾಂತೇಶ್ವರ ಸ್ವಾಮೀಜಿ, ರಾಮದುರ್ಗದ ಗುರುಶಾಂತೇಶ್ವರಮಠದ ಶಾಂತವೀರ ಸ್ವಾಮೀಜಿ, ಜಮಖಂಡಿ ಗೌರಿಶಂಕರ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಪುರಾಣ ಪ್ರವಚನ ಸಮಿತಿ ಸಂಚಾಲಕ ಮಂಜುನಾಥ ಶರಣರು ಇದ್ದರು.

ಶಲವಡಿಯ ವೀರಯ್ಯಶಾಸಿ ಪ್ರವಚನ ನಡೆಸಿಕೊಟ್ಟರು. ಮುತ್ತಣ್ಣ ಹೆಬಸೂರು ಸಂಗೀತ, ಅಕ್ಬರ್‌ಸಾಹೇಬ್ ನದಾ ತಬಲಾ ಸಾಥ್ ನೀಡಿದರು. ಶಿಂದಿಕುರಬೇಟದ ಮೆಹಬೂಬಸಾಬ್ ನದಾಫ್ ಅನ್ನದಾಸೋಹ ನೆರವೇರಿಸಿದರು. ಗಣ್ಯರನ್ನು ಶಾಲು ಹೊದಿಸಿ ಸತ್ಕರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net