ಹೃದಯ ವೈಶಾಲ್ಯದಲ್ಲಿದೆ ಬದುಕಿನ ಧನ್ಯತೆ

Oplus_131072
ಬಸವಕಲ್ಯಾಣ ತಾಲೂಕಿನ ಕೋಹಿನೂರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಧರ್ಮ ಸಭೆಯನ್ನು ಶ್ರೀ ಡಾ.ಚನ್ನವೀರ ಶಿವಾಚಾರ್ಯ ಉದ್ಘಾಟಿಸಿದರು. ಕಲಬುರಗಿ ಪಾಲಿಕೆ ಅಧಿಕಾರಿ ಸಾವಿತ್ರಿ ಶರಣು ಸಲಗರ, ಮಲ್ಲಿನಾಥ ಹಿರೇಮಠ, ವೀರಣ್ಣ ಮೂಲಗೆ, ಲಕ್ಷ್ಮೀ ಅಟ್ಟೂರ, ಶಿವಾನಂದ ಪಾಟೀಲ್, ಸರಸ್ವತಿ ಪಾಟೀಲ್, ಜಯಶ್ರೀ ಕೋಹಿನೂರ ವಾಡಿ, ರಾಚಯ್ಯ ಶಾಸ್ತ್ರೀ, ಅಪ್ಪಣ್ಣ ಜನವಾಡ ಇದ್ದರು.
Published on

ಬಸವಕಲ್ಯಾಣ: ಹೃದಯ ವೈಶಾಲ್ಯದಲ್ಲಿ ಬದುಕಿನ ಧನ್ಯತೆ ಅಡಗಿದೆ ಎಂಬುದನ್ನು ಅರಿತು ಗುರು ಕಾರುಣ್ಯದಿಂದ ಚಂದದ ಜೀವನ ಸಾಗಿಸುವಂತಾಗಬೇಕು ಎಂದು ಹಾರಕೂಡ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಶ್ರೀ ಡಾ.ಚನ್ನವೀರ ಶಿವಾಚಾರ್ಯ ನುಡಿದರು.

ಕೋಹಿನೂರ ಗ್ರಾಮದಲ್ಲಿ ಸದ್ಗುರು ಶ್ರೀ ಚನ್ನಮಲ್ಲೇಶ್ವರ ೧೧೫ನೇ ಜಾತ್ರೋತ್ಸವ ನಿಮಿತ್ತ ಶುಕ್ರವಾರ ಏರ್ಪಡಿಸಿದ್ದ ಧರ್ಮ ಸಭೆಯಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಆಸ್ತಿ, ಅಂತಸ್ತು, ಅಧಿಕಾರ, ಐಶ್ವರ್ಯಗಳಿಂದ ಕೂಡಿದ ನಶ್ವರ ಶ್ರೀಮಂತಿಕೆಗಿಂತ ಈಶ್ವರ ಸಾಕ್ಷಾತ್ಕಾರದ ಹೃದಯವಂತಿಕೆಯಿಂದ ಉನ್ನತ ಬದುಕು ಸಾಧ್ಯವಾಗಿಸಿಕೊಳ್ಳಬಹುದು ಎಂದರು.

ಹೃದಯ ಶ್ರೀಮಂತಿಕೆ ಅನ್ನುವುದು ತಪಸ್ಸು. ಸಿರಿ ಸಂಪದದಿಂದ ಕೂಡಿದ ನಿರ್ಮಲ ಮನಸ್ಸಿನಲ್ಲಿ ಶಿವಾಂಶ ತುಂಬಿ ತುಳುಕಾಡುತ್ತಿರುತ್ತದೆ. ಹೃದಯವಂತನ ನಡತೆ ಸಮಾಜಭೂಷಿತ ಆಗಿರುತ್ತದೆ. ಆತ ಎಲ್ಲರ ಸುಖದಲ್ಲಿ ತನ್ನ ಸೌಖ್ಯ ಬಯಸುವಂಥವ ಆಗಿರುತ್ತಾನೆ. ಮನದ ಸಿರಿ ಮುಂದೆ ಭೌತಿಕ ಸಂಪತ್ತಿಗೆ ಯಾವಾಗಲೂ ಸೋಲು ಖಚಿತ ಎಂಬುದನ್ನು ಅರಿತು ಬದುಕಬೇಕು. ಭಕ್ತಿಯ ರಸಾನುಭವದಿಂದ ಹೃದಯದ ಮೃದುತ್ವ ಏರ್ಪಟ್ಟು ಗುರುವಿನ ನಾಮಸ್ಮರಣೆ ಹಬ್ಬವಾಗಿ ಮಾರ್ಪಡುತ್ತದೆ ಎನ್ನುವುದಕ್ಕೆ ಕೋಹಿನೂರ ಜನತೆ ಆಯೋಜಿಸಿದ್ದ ಸಮಾರಂಭವೇ ಸಾಕ್ಷಿ ಎಂದು ಸರ್ವರನ್ನು ಶುಭ ಹಾರೈಸಿದರು.

ಕಲಬುರಗಿ ಪಾಲಿಕೆ ಎಸ್ಟೇಟ್ ಅಧಿಕಾರಿ ಸಾವಿತ್ರಿ ಶರಣು ಸಲಗರ, ಮಲ್ಲಿನಾಥ ಹಿರೇಮಠ, ದೇವಸ್ಥಾನ ಸಮಿತಿ ಅಧ್ಯಕ್ಷ ವೀರಣ್ಣ ಮೂಲಗೆ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ಪರಶುರಾಮ ಅಟ್ಟೂರ, ಪ್ರಮುಖರಾದ ಶಿವಾನಂದ ಪಾಟೀಲ್, ಸರಸ್ವತಿ ಪಾಟೀಲ್, ಜಯಶ್ರೀ ಕೋಹಿನೂರ ವಾಡಿ, ರಾಚಯ್ಯ ಶಾಸ್ತ್ರೀ ಯಾದಗಿರ, ಶಿವಾ ಕಲೋಜಿ, ಅಂಬರಾಯ ಉಗಾಜಿ, ರತಿಕಾಂತ ಕೋಹಿನೂರ, ಅಂಬಾದಾಸ ಸಜ್ಜನ, ಚಂದ್ರಕಾಂತ ಹುಸಗೆ ಉಪಸ್ಥಿತರಿದ್ದರು.

ಓಂ ಪಾಟೀಲ್ ಸ್ವಾಗತಿಸಿದರು. ಶರಣು ಪವಾಡಶೆಟ್ಟಿ ಶ್ರೀಗಳ ಆಶೀರ್ವಚನದ ಬರಹ ವಾಚಿಸಿದರು. ಮಲ್ಲಿಕಾರ್ಜುನ ಹಡಪದ ನಿರೂಪಣೆ ಮಾಡಿದರು. ಕರಬಸಯ್ಯ ಸ್ವಾಮಿ ಪ್ರಾರ್ಥನಾಗೀತೆ ಹಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net