

ಕೋಟ: ಶ್ರೀ ವಿನಾಯಕ ಯುವಕ ಮಂಡಲ ಸಾಬ್ರಕಟ್ಟೆ-ಯಡ್ತಾಡಿ ಕೊಡಮಾಡುವ 2024ನೇ ಸಾಲಿನ ಶ್ರೀವಿನಾಯಕ ಸಾಧನ ಶ್ರೀ ಪುರಸ್ಕಾರಕ್ಕೆ ವಿಶು ಶೆಟ್ಟಿ ಅಂಬಲಪಾಡಿ ಅವರನ್ನು ಆಯ್ಕೆ ಮಾಡಲಾಗಿದೆ. ಪುರಸ್ಕಾರ ಪ್ರದಾನ ಕಾರ್ಯಕ್ರಮ ಅ.9ರಂದು ಸಂಜೆ 7.30ಕ್ಕೆ ಮಹಾತ್ಮ ಗಾಂಧಿ ಫ್ರೌಡಶಾಲೆ ಸಾಬ್ರಕಟ್ಟೆಯಲ್ಲಿ ಶ್ರೀ ಸಾರ್ವಜನಿಕ ಶಾರದೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವುದೆಂದು ಯುವಕ ಮಂಡಲ ಅಧ್ಯಕ್ಷ ಅಮೃತ್ ಪೂಜಾರಿ, ಕಾರ್ಯದರ್ಶಿ ಗಿರೀಶ್ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.