ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ ‘ಸಾಧನಾ’ ಪ್ರಶಸ್ತಿ

kon
Published on

ಕೊಕ್ಕರ್ಣೆ: ಶ್ರೀ ಮಲ್ಲಿಕಾರ್ಜುನ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಗೆ 2024-25ನೇ ಸಾಲಿನ ಸರ್ವತೋಮುಖ ಅಭಿವೃದ್ಧಿಗಾಗಿ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನೀಡುವ ‘ಸಾಧನಾ’ ಪ್ರಶಸ್ತಿ ಲಭಿಸಿದೆ. ಮಂಗಳೂರಿನಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಡಾ.ಎಂ.ಎನ್ ರಾಜೇಂದ್ರಕುವಾರ್ ಅವರು ಸೊಸೈಟಿ ಅಧ್ಯಕ್ಷ ಕೃಷ್ಣ ನಾಯ್ಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರಸಿಂಹ ನಾಯ್ಕ ಅವರಿಗೆ ಪ್ರಶಸ್ತಿ ಪ್ರದಾನ ವಾಡಿದರು.

ಉಡುಪಿ ಜಿಲ್ಲೆಯ ಗ್ರಾವಾಂತರ ಪ್ರದೇಶದಲ್ಲಿ 3 ಶಾಖೆಗಳನ್ನು ಹೊಂದಿದ್ದು, 2024-25ನೇ ಸಾಲಿನಲ್ಲಿ ಸಂ 194 ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆಸಿದೆ. ಸಂದ ನಿದೇಶಕ ವಸಂತ ನಾಯ್ಕ ಒಳಬೈಲು, ನರಸಿಂಹ ನಾಯ್ಕ ಯಡ್ತಾಡಿ, ಸಿಬ್ಬಂದಿ ವ್ನಿೇಶ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net