ಸಿನಿಮಾದಲ್ಲಿ ಸದ್ಗುರು ಜಗ್ಗಿ ವಾಸುದೇವ್; ಡೈಲಾಗ್​ ಹೊಡೆದ ವಿಡಿಯೋ ವೈರಲ್‌

jaggi vasudev2
Published on

ಬೆಂಗಳೂರು: ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಹಾಲಿವುಡ್ ಸಿನಿಮಾನಲ್ಲಿ ನಟಿಸಿದ್ದಾರೆ. ಈ ಕುರಿತಾದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಭಾರತೀಯ ಸಿನಿಮಾಗಳಿಗೆ ವಿಶ್ವದಾದ್ಯಂತ ಬೇಡಿಕೆ ಸೃಷ್ಟಿಯಾಗಿದೆ.   ಭಾರತದ ಜನಪ್ರಿಯ ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್ ಹಾಲಿವುಡ್​ನ  ಸಿನಿಮಾನಲ್ಲಿ ಕಾಣಿಸಿಕೊಂಡಿದ್ದಾರೆ.

ಹಾಲಿವುಡ್​ನ ಅತ್ಯಂತ ಜನಪ್ರಿಯ ಗಾಯಕಿ, ಸಂಗೀತಜ್ಞೆ ಜೆನ್ನಿಫರ್ ಲೊಪೇಜ್​ರ ಹೊಸ ಮ್ಯೂಸಿಕ್ ಸಿನಿಮಾ ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಸಿನಿಮಾನಲ್ಲಿ ಸದ್ಗುರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಜೆನ್ನಿಫರ್ ಲೊಪೇಜ್ ‘ದಿಸ್ ಈಸ್ ಮಿ ನೌ’ ಹೆಸರಿನ ಸ್ಟುಡಿಯೋ ಆಲ್ಬಂ ಮಾಡಿದ್ದಾರೆ. ಅದನ್ನು ಆಧರಿಸಿ ‘ದಿಸ್ ಈಸ್ ಮಿ ನೌ: ಎ ಲವ್ ಸ್ಟೋರಿ’ ಮ್ಯೂಸಿಕಲ್ ಸಿನಿಮಾ ಮಾಡಲಾಗಿದ್ದು, ಇದರಲ್ಲಿ ಸದ್ಗುರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಗುರು ಅವರು ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ವಿಡಿಯೋ ತುಣುಕು ಸಖತ್ ವೈರಲ್ ಆಗಿದೆ. ಹಾಲಿವುಡ್ ನಟರೊಟ್ಟಿಗೆ ಸದ್ಗುರು ನಟಿಸಿ  ಕೆಲವು ಡೈಲಾಗ್​ಗಳನ್ನು ಸಹ ಸಿನಿಮಾದಲ್ಲಿ ಹೊಡೆದಿದ್ದಾರೆ. ಸದ್ಗುರು ತಮ್ಮ ಸಾಧಾರಣ ಉಡುಗೆಯಾದ ಬರಿಮೈಗೆ ಒಂದು ಶಲ್ಯವನ್ನು ಸುತ್ತಿಕೊಂಡು, ಪೇಟವೊಂದನ್ನು ತೊಟ್ಟುಕೊಂಡು ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net