

ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನಲ್ಲಿ ಎನ್.ಸಿ.ಸಿ ಆರ್ಮಿ ಮತ್ತು ನೇವಿ ಘಟಕಗಳು, ದೈಹಿಕ ಶಿಕ್ಷಣ ವಿಭಾಗ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರೋವರ್ಸ್ ಮತ್ತು ರೇಂಜರ್ಸ್ ಇವುಗಳ ಸoಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಸದ್ಭಾವನ ದಿನವನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾಲೇಜಿನ ಪ್ರಾಚಾರ್ಯರಾದ ಡಾ. ಆಂಟನಿ ಪ್ರಕಾಶ್ ಮೊoತೇರೋ ಮಾತನಾಡಿ ಭಾರತ ದೇಶವು ಜಗತ್ತಿನಲ್ಲಿಯೇ ವಿವಿಧತೆಯನ್ನು ಹೊಂದಿದ ದೇಶವಾಗಿದ್ದು ವಿಶ್ವದೆಲ್ಲೆಡೆ ಏಕತೆಗೆ ಹೆಸರುವಾಸಿಯಾಗಿದೆ. ವಿಭಿನ್ನ ರೀತಿಯ ಜಾತಿ, ಧರ್ಮ, ಪಂಥ, ಪ್ರದೇಶ, ಭಾಷೆ, ಸಂಸ್ಕೃತಿಯ ಜನರು ಯಾವುದೇ ರೀತಿಯ ದ್ವೇಷದ ಭಾವನೆಗಳಿಲ್ಲದೆ ಪರಸ್ಪರ ಸಾಮರಸ್ಯದ ಭಾವನೆಯಿಂದ ಇರುವುದು ಇಲ್ಲಿನ ವಿಶೇಷತೆಯಾಗಿದೆ. ನಮ್ಮ ದೇಶದಲ್ಲಿ ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಸoವಿಧಾನವಿದೆ. ಇದರಲ್ಲಿ ಪ್ರತಿಯೊಬ್ಬ ಪ್ರಜೆಗೂ ತನ್ನಿಷ್ಟದಂತೆ ಜೀವಿಸುವ ಸ್ವಾತಂತ್ರ್ಯವನ್ನು ಕಲ್ಪಿಸಲಾಗಿದೆ. ತನ್ನ ಹಕ್ಕನ್ನು ಪ್ರತಿಪಾದಿಸುದರೊಂದಿಗೆ ಇತರರನ್ನು ಸೋದರತಾ ಭಾವನೆಯಿಂದ ಕಾಣುವ ಜವಾಬ್ದಾರಿಯನ್ನು ಪಾಲಿಸುವುದು ಬಹಳ ಅಗತ್ಯ ಎಂದು ಹೇಳಿದರು.
ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಎನ್.ಸಿ.ಸಿ ಕೆಡೆಟುಗಳು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು, ರೋವರ್ಸ್ ಮತ್ತು ರೇಂಜರ್ಸ್ ವಿದ್ಯಾರ್ಥಿಗಳು ಹಾಗೂ ಕ್ರೀಡಾಪಟುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸದ್ಭಾವನ ದಿನಾಚರಣೆಯ ಪ್ರತಿಜ್ಞಾವಿಧಿಯನ್ನು ಬೋದಿಸಲಾಯಿತು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಯದ ವಾಸುದೇವ ಎನ್. ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಾಲೇಜಿನ ಎನ್.ಸಿ.ಸಿ. ಅಧಿಕಾರಿಯದ ಲೆಫ್ಟಿನೆಂಟ್ ಜೋನ್ಸನ್ ಡೇವಿಡ್ ಸಿಕ್ವೇರ ಕಾರ್ಯಕ್ರಮವನ್ನು ಸಂಯೋಜಿಸಿದರು.