

ವಿಜಯವಾಣಿ ಸುದ್ದಿಜಾಲ ಗದಗ
ಜೀವನದಲ್ಲಿ ಮಾನವೀಯ ಮೌಲ್ಯಗಳೊಂದಿಗೆ ಮಧುರ ಕಳೆದು, ಬದುಕಿನ ಪ್ರತಿ ದಿನವನ್ನು ಸಾರ್ಥಕವಾಗಿ ಕಳೆಯಬೇಕು ಎಂದು ಸದಾಶಿವಾನಂದ ಶ್ರೀಗಳು ಹೇಳಿದರು.
ಜ. ಶಿವಾನಂದ ಪಿಯು ಕಾಲೇಜಿನಲ್ಲಿ ಇತ್ತೀಚೆಗೆ ಜರುಗಿದ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಶ್ರೀಗಳು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ವಿದ್ಯಾಥಿರ್ ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಪ್ರೊ. ಅನ್ನದಾನಿ ಹಿರೇಮಠ ಮಾತನಾಡಿ, ಥಾಮಸ್ ಆಲ್ವಾ ಎಡಿಸನ್ ಅವರ ಯಶಸ್ಸಿನ ಕುರಿತು ವಿವರಿಸಿದರು. ಎಸ್.ವಿ. ವೆರ್ಣೆಕರ, ಪ್ರಿಯಾಂಕ ಪಾಟೀಲ, ಎಸ್.ಬಿ.ಹಿರೇಮಠ, ಡಾ. ಜಿ. ಬಿ. ಪಾಟೀಲ ಇದ್ದರು.