ರಥವನ್ನು ಎಳೆದಾಗ ಜೀವನ ಸಾರ್ಥಕವಾಗುತ್ತದೆ : ಸದಾಶಿವಾನಂದ ಶ್ರೀಗಳು

08GDG11
Published on

ವಿಜಯವಾಣಿ ಸುದ್ದಿಜಾಲ ಗದಗ
ಜಗತ್ತಿನಲ್ಲಿ ಸಾಕಷ್ಟು ದೇಶಗಳಿದ್ದರೂ ಭೂಮಿ, ನೀರು ಹಾಗೂ ಅನ್ನಕ್ಕೆ ದೈವದ ಸ್ಥಾನ ನೀಡಿರುವುದು ಭಾರತ ದೇಶದಲ್ಲಿ ಮಾತ್ರ ಎಂದು ಗದುಗಿನ ಶಿವಾನಂದ ಮಠದ ಸದಾಶಿವಾನಂದ ಶ್ರೀಗಳು ಹೇಳಿದರು.
ನಗರದ ಗಂಗಾಪೂರ ಪೇಟೆಯಲ್ಲಿ ದುರ್ಗಾದೇವಿ ಜಾತ್ರಾ ಮಹೋತ್ಸದ ಅಂಗವಾಗಿ ಜರುಗಿದ ಧಾಮಿರ್ಕ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ಜಾತ್ರೆ, ರಥೋತ್ಸವ ಒಂದು ನೆಪ ಮಾತ್ರವಾಗಿದೆ. ಜಾತ್ರೆಯ ನೆಪದಲ್ಲಿ ಎಲ್ಲರೂ ಸೇರಿಕೊಂಡು ಹಗ್ಗ ಹಿಡಿದುಕೊಂಡು ರಥವನ್ನು ಎಳೆದಾಗ ಜೀವನ ಸಾರ್ಥಕವಾಗುತ್ತದೆ. ಕಳಸಗಿಂಡಿ ತಲೆಯ ಮೇಲೆ ಬರುವ ಮುಂಚೆ ಎಲ್ಲರೂ ತಮ್ಮ ಕರ್ತವ್ಯ ಮುಗಿಸಬೇಕು. ದೇವರನ್ನು ಹಣ್ಣು ಕಾಯಿ, ಹೂವುಗಳಿಂದ ಮಾಡುವ ಪೂಜೆ ಒಂದಡೆಯಾದರೆ, ಬೆಳ್ಳಂಬೆಳಿಗ್ಗೆ ಹೊಲದಲ್ಲಿ ಮುರಿದು ದುಡಿಯುವ ರೈತನ ಕಾಯಕ ಅನ್ನಪೂರ್ಣೇಶ್ವರಿ ದೇವಿಯ ಪೊಜೆಯಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಧೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಣಾಧಿಕಾರಿ ಶಂಕ್ರಣ್ಣ ಅಂಗಡಿ ಅವರು ದೇವಿಯ ಲೀಲೆಗಳ ಕುರಿತು ಉಪನ್ಯಾಸ ನೀಡಿದರು.
ವೇದಿಕೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯ ಸಿದ್ದಣ್ಣ ಪಲ್ಲೇದ, ನಗರಸಭೆ ಅಧ್ಯೆ ಉಷಾ ದಾಸರ, ಉಪಾಧ್ಯೆ ಸುನಂದಾ ಬಾಕಳೆ, ಮಾರುತಿ ಜೋಗದಂಡಕರ, ಬಸವರಾಜ ಹಿಕ್ಕಲಗುತ್ತಿ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net