ನಳಿನ್​ಕುಮಾರ್ ಹೇಳಿಕೆ ವಾಪಸ್​ಗೆ ಆಗ್ರಹ

30 smg Giresh Banjara
Published on

ಶಿವಮೊಗ್ಗ: ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ತರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ನೀಡಿರುವ ಹೇಳಿಕೆಯನ್ನು ಹಿಂಪಡೆಯದಿದ್ದರೆ ನ.2ರಂದು ಶಿವಮೊಗ್ಗದ ಗೋಪಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಂಜಾರ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಡಿ.ಆರ್.ಗಿರೀಶ್ ಎಚ್ಚರಿಸಿದ್ದಾರೆ.

ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಪ್ರಚಾರ ಕಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ಕುಮಾರ್ ಕಟೀಲ್ ಅವರು ನ್ಯಾ. ಸದಾಶಿವ ಆಯೋಗದ ವರದಿ ಜಾರಿಗೆ ತರುವ ಭರವಸೆ ನೀಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅವರು, ಮತ ರಾಜಕಾರಣಕ್ಕಾಗಿ ನಳಿನ್​ಕುಮಾರ್ ಕಟೀಲ್ ಈ ಹೇಳಿಕೆ ನೀಡಿದ್ದು ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಬಿಜೆಪಿಯ ಈ ನಿಲುವು ಮೀಸಲಾತಿಯಲ್ಲಿ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಶಿರಾ ಕ್ಷೇತ್ರದಲ್ಲಿ ಮಾದಿಗ, ಬಂಜಾರ, ಕೊರಮ ಹಾಗೂ ಕೊರಚ ಜನಾಂಗ ಬಿಜೆಪಿ ಬೆಂಬಲಿಸದಿರಲು ತೀರ್ವನಿಸಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸದಾಶಿವ ಆಯೋಗದ ವರದಿ ಬಗ್ಗೆ ಎಲ್ಲೂ ಸಮರ್ಪಕ ಚರ್ಚೆಯಾಗಿಲ್ಲ. ಸೋರಿಕೆಯಾದ ವರದಿ ಕೆಲ ಅಂಶಗಳ ಮೇಲೆ ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಿವೆ. ವರದಿ ಜಾರಿಯಿಂದ ಹಿಂದುಳಿದ ಮಾದಿಗ, ಬಂಜಾರ, ಕೊರಮ ಹಾಗೂ ಕೊರಚ ಜನಾಂಗಕ್ಕೆ ಅನ್ಯಾಯವಾಗುತ್ತದೆ ಎಂಬ ಆತಂಕವಿದೆ ಎಂದರು.

ಬಂಜಾರ ಸಮಾಜದ ಪ್ರಮುಖರಾದ ಉಷಾ ನಾಯ್್ಕ ಉಮಾಮಹೇಶ್ವರ ನಾಯ್್ಕ ಜಯ ನಾಯ್್ಕ ಪ್ರವೀಣ್ ನಾಯ್್ಕ ಬಾಲಾಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net