ಸದಾಶಿವ ಆಯೋಗ ವರದಿ ಜಾರಿಗೆ ರಾಷ್ಟ್ರೀಯ ಸೇವಾಲಾಲ್​ ಸೇನಾ ವಿರೋಧ

12GDG03
Published on

ವಿಜಯವಾಣಿ ಸುದ್ದಿಜಾಲ ಗದಗ
ಎ. ಜೆ. ಸದಾಶಿವ ಆಯೋಗ ವರದಿ ಜಾರಿಗೆ ರಾಷ್ಟ್ರೀಯ ಸೇವಾಲಾಲ್​ ಸೇನಾ ವಿರೋಧಿಸಿದೆ.
ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ, ಈ ಪೈಕಿ ಕೇವಲ ಮೂರು ಭಾಗಗಳಿಗೆ ಮಾತ್ರ ಮೀಸಲಾತಿಯನ್ನು ನೀಡಿ, ಉಳಿದ ಒಂದು ಭಾಗಕ್ಕೆ ಸೇರಿದ ಜಾತಿಯವರನ್ನು ಪರಿಶಿಷ್ಟ ಜಾತಿಯಿಂದ ಕೈಬಿಡುವಂತೆ ಶಿಾರಸು ಮಾಡಿದ್ದರಿಂದ ಲಂಬಾಣಿ ಸೇರಿ ಹಲವು ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೀಗಾಗಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರವು ಈ ವರದಿ ಜಾರಿಗೆ ಮುಂದಾಗಬಾರದು ಎಂದು ಸೇವಾಲಾಲ್​ ಸೇನಾ ಸಂಟನೆ ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಸಿಎಂ ಸಿದ್ದರಾಮಯ್ಯ ಅವರಿಗೆ ಮಂಗಳವಾರ ಮನವಿ ಸಲ್ಲಿಸಿತು.
ಸೇವಾಲಾಲ್​ ಸೇನಾ ಅಧ್ಯ ಕೃಷ್ಣಪ್ಪ ಲಮಾಣಿ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ 1919 ರಲ್ಲಿ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವಂತ ಬಂಜಾರ ಸಮುದಾಯದ ಮೀಸಲಾತಿಯನ್ನು ಹಾಗೂ ಡಾ.ಬಿ.ಆರ್​ ಅಂಬೇಡ್ಕರ್​ ಅವರು 101 ಜಾತಿಗಳನ್ನ ಅಸ್ಪಶ್ಯ ಜಾತಿಗಳೆಂದು 1936ರ ಪರಿಶಿಷ್ಟ ಜಾತಿ ಆದೇಶದ ಪಟ್ಟಿ ಮೇರೆಗೆ ಸಂವಿಧಾನದ ವಿಧಿ 341 ಪ್ರಕಾರ ಶಾಸನಬದ್ಧವಾಗಿ ಸಂವಿಧಾನದಲ್ಲಿ ನಮೂದಿಸಲಾಗಿದೆ. ಆದರೆ, ಆಯೋಗ ವರದಿಯಲ್ಲಿ 101 ಜಾತಿಗಳಲ್ಲಿ ನಾಲ್ಕು ಭಾಗಗಳನ್ನಾಗಿ ಮಾಡಿ ಕೇವಲ ಮೂರರಷ್ಟು ಮೀಸಲಾತಿಯನ್ನು ನೀಡಿ, ಇನ್ನೂಳಿದ ಒಂದು ಭಾಗಕ್ಕೆ ಪರಿಶಿಷ್ಟ ಜಾತಿಯಿಂದ ಕೈಬಿಡುವ ಶಿಾರಸ್ಸಿನ ಮೂಲಕ ಸಂವಿಧಾನ ವಿರೋಧ ನೀತಿಯನ್ನು ಅನುಸರಿಸಿದೆ. ಈ ಮಧ್ಯೆ ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಗ್ರಾಹಕ ವ್ಯವಹಾರಗಳ ಇಲಾಖೆ ಸಚಿವ ಕೆ.ಎಚ್​ ಮುನಿಯಪ್ಪ ಅವರು ಸದಾಶಿವ ಆಯೋಗ ಜಾರಿಗೆ ಮಾಡುವಂತೆ ೇತ್ರದ ಶಾಸಕರ ಮೇಲೆ ಮುತ್ತಿಗೆ ಹಾಕಿ ಎಂಬ ಅವರ ಹೇಳಿಕೆ ನೀಡಿದ್ದು ಖಂಡನೀಯ. ಬಂಜಾರ ಸಮುದಾಯಕ್ಕೆ ಅನ್ಯಾಯ ಮಾಡುತ್ತಿರುವ ಎ. ಜೆ ಸದಾಶಿವ ಆಯೋಗದ ಅವೈಜ್ಞಾನಿಕ ವರದಿಯನ್ನು ಯಾವುದೇ ಕಾರಣಕ್ಕೂ ಒಪ್ಪಬಾರದು ಎಂದು ಒತ್ತಾಯಿಸಿದರು.
ಚಂದ್ರಶೇಖರ್​ ರಾಥೋಡ್​, ಶ್ರೀನಿವಾಸ್​ ಚೌಹಾಣ್​ ಸೇರಿ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net