

ಡಾ.ಎ.ಸದಾನಂದ ಶೆಟ್ಟಿಯವರಿಗೆ ವಿಶೇಷ ಮಕ್ಕಳಿಂದ ಗೌರವಾರ್ಪಣೆ
ಮಂಗಳೂರು : ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಶ್ರೀ ದೇವಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ
ಡಾ. ಎ. ಸದಾನಂದ ಶೆಟ್ಟಿ ಅವರನ್ನು ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿಯುತ ಶಾಲೆ ಮತ್ತು ತರಬೇತಿ ಸಂಸ್ಥೆಯ ವಿಶೇಷ ಮಕ್ಕಳು ಹಾಗೂ ಶಿಕ್ಷಕರು ಅಭಿನಂದಿಸಿದರು. ಶ್ರೀ ಗಣೇಶಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಮಹಾಬಲ ಮಾರ್ಲ, ಖಜಾಂಜಿ ಜಗದೀಶ್ ಶೆಟ್ಟಿ, ನಿರ್ದೇಶಕ ಮಹಮ್ಮದ್ ಬಶೀರ್ ಮತ್ತು ಸಾನಿಧ್ಯದ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.