

ಮೈಸೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮಾಹಿತಿ ತಜ್ಞ ಜೆ.ಎಂ.ರಾಜಶೇಖರ ದತ್ತಿಗೆ ಪ್ರಶಸ್ತಿಗೆ ನಗರದ ವಕೀಲ ಸಾ.ತಿ. ಸದಾನಂದಗೌಡ ಅವರು ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.
ಮಾಹಿತಿ ಹಕ್ಕು ತಜ್ಞ ಜೆ.ಎಂ.ರಾಜಶೇಖರ ಅವರ ಹೆಸರಿನಲ್ಲಿ ಕರ್ನಾಟಕ ರಾಜ್ಯ ಪ್ರತಿಭಾ ಪರಿಷತ್ತಿನಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿ ಸ್ಥಾಪಿಸಿದ್ದು ಮಾಹಿತಿ ಹಕ್ಕು, ಗ್ರಾಹಕರ ಹಕ್ಕುಗಳ ಅನುಷ್ಟಾನಕ್ಕೆ ಹೋರಾಟ ನಡೆಸಿದವರಿಗೆ ಈ ಪುರಸ್ಕಾರ ನೀಡಿ ಗೌರವಿಸಿಕೊಂಡು ಬರಲಾಗುತ್ತಿದೆ.
2025ನೇ ಸಾಲಿಗೆ ಮಂಡ್ಯ ಜಿಲ್ಲೆ ಸಾತೇನಹಳ್ಳಿಯ ಸಾ.ತಿ.ಸದಾನಂದಗೌಡ ಅವರನ್ನು ಆಯ್ಕೆ ಮಾಡಲಾಗಿದೆ. ಹದಿನೈದು ವರ್ಷಗಳಿಂದಲೂ ಮಾಹಿತಿ ಹಕ್ಕು ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಮೂರು ಸಾವಿರಕ್ಕೂ ಹೆಚ್ಚು ಮಾಹಿತಿ ಹಕ್ಕು ಅಡಿ ಅರ್ಜಿ ಮೂಲಕ ಮಾಹಿತಿ ಸಂಗ್ರಹಿಸಿದ್ದಾರೆ. ಈ ಮೂಲಕ ನೂನ್ಯತೆಗಳನ್ನು ಹೊರಗೆಳೆದು ಸಾರ್ವಜನಿಕ ಜಾಗೃತಿ ಮೂಡಿಸುತ್ತಿದ್ದಾರೆ.