ಹವ್ಯಕ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿ ಸದಾನಂದ ಭಟ್ಟ

11hnr1
Published on

ಹೊನ್ನಾವರ: ಇಲ್ಲಿಯ ದಿ. ಹೊನ್ನಾವರ ಹವ್ಯಕ ಅರ್ಬನ್ ಕೋ ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಆಡಳಿತ ಮಂಡಳಿಗೆ ಅಧ್ಯಕ್ಷರಾಗಿ ಸದಾನಂದ ಭಟ್ಟ, ಉಪಾಧ್ಯಕ್ಷರಾಗಿ ಗಣಪತಿ ಜೋಶಿ ಬಾರಾಗದ್ದೆ ಅವಿರೋಧವಾಗಿ ಪುನರಾಯ್ಕೆಗೊಂಡಿದ್ದಾರೆ.

ನೂತನ ಆಡಳಿತ ಮಂಡಳಿಯ 13 ನಿರ್ದೇಶಕರ ಸ್ಥಾನಗಳಿಗೆ ಜ. 5ರಂದು ಚುನಾವಣೆ ನಿಗದಿಯಾಗಿತ್ತು. ಡಿಸೆಂಬರ್ 31ರಂದು ಎಲ್ಲ ನಿರ್ದೇಶಕರ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು. ನಿರ್ದೇಶಕರಾಗಿ ಗಣಪತಿ ಹೆಗಡೆ ಗುಡ್ಡೇಬಾಳ, ಅರುಣ ಹಬ್ಬು ಹಳದೀಪುರ, ನಾರಾಯಣ ಭಟ್ ಪ್ರಭಾತನಗರ, ಕೃಷ್ಣ ಹೆಗಡೆ ಅಂತ್ರವಳ್ಳಿ, ರವಿ ಎನ್.ಎಂ. ನವಿಲಗೋಣ, ರಾಮಚಂದ್ರ ಭಟ್ಟ ನೀಲಕೋಡ, ನಾರಾಯಣ ಹೆಗಡೆ ಮುಗ್ವಾ, ದೇವರಾಯ ನಾಯ್ಕ ಸಾಲ್ಕೋಡ, ರಮೇಶ ಮುಕ್ರಿ ಮಠದಕೇರಿ, ಮಹಾದೇವಿ ಹೆಗಡೆ ಸಾಲ್ಕೋಡ, ಮಾದೇವಿ ಭಟ್ಟ ವಂದೂರು ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net