ಸದಾನಂದ ಬಾಬಾ ಜಾತ್ರೆ ಏ. 6ರಂದು

IMG-20250329-WA0003.jpg
Published on

ಹುಬ್ಬಳ್ಳಿ: ಧಾರವಾಡದ ರಾಯಾಪುರ ಶ್ರೀ ದತ್ತ ಮಂದಿರ ಹಾಗೂ ಶ್ರೀ ಸದ್ಗುರು ಸದಾನಂದ ಬಾಬಾ ಅವರ ಆಶ್ರಮದಲ್ಲಿ ಶ್ರೀ ಸದ್ಗುರು ಸದಾನಂದ ಬಾಬಾ ಅವರ ಜಾತ್ರಾ ಮಹೋತ್ಸವ ಏ. 6ರಂದು ಏರ್ಪಡಿಸಲಾಗಿದೆ.

ದತ್ತಾವತಾರಿ ಸದ್ಗುರು ಸದಾನಂದ ನವಮಿ ಜಾತ್ರೆ ಅಂಗವಾಗಿ ಅಂದು ಬೆಳಗ್ಗೆ 10ಕ್ಕೆ ಕರ್ತೃ ಗದ್ದುಗೆಯ ಪೂಜೆ, ಪಾದುಕಾಭಿಷೇಕ, ತೊಟ್ಟಿಲೋತ್ಸವ, ಭಜನೆ, ಆರತಿ, ಮಧ್ಯಾಹ್ನ 12ಕ್ಕೆ ತೀರ್ಥ ಪ್ರಸಾದ ಹಾಗೂ ಮಹಾಪ್ರಸಾದ ನಡೆಯಲಿದೆ.

ನಂತರ ಬಾಬಾ ಅವರ ಪಲ್ಲಕ್ಕಿ ಉತ್ಸವ, ಸಂಜೆ 5.30ಕ್ಕೆ ಮಹಾರಥೋತ್ಸವ ಜರುಗಲಿದೆ. ಅಹೋರಾತ್ರಿ ಭಜನೆ, ಅಖಂಡ ಜಾಗರಣೆ ನಡೆಯಲಿದೆ.

ಏ. 7ರಂದು ಬೆಳಗ್ಗೆ 10ಕ್ಕೆ ಮಹಾರಥಕ್ಕೆ ಕಡುಬಿನ ಕಾಳಗ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net