

ಹುಬ್ಬಳ್ಳಿ: ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ತಾಯಿ ಬಸವಣ್ಣೆಮ್ಮ ಶಿವಪ್ಪ ಶೆಟ್ಟರ್ (೮೬) ಶುಕ್ರವಾರ ಮಧ್ಯಾಹ್ನ ನಿಧನ ಹೊಂದಿದರು.
ಇಲ್ಲಿಯ ಕೇಶ್ವಾಪುರ ಶಬರಿ ನಗರದಲ್ಲಿ ಇನ್ನೊಬ್ಬ ಪುತ್ರ ಎಂಎಲ್ ಸಿ ಪ್ರದೀಪ ಶೆಟ್ಟರ್ ನಿವಾಸದಲ್ಲಿ ಅವರು ನಿಧನ ಹೊಂದಿದರು. ಅವರಿಗೆ 86 ವರ್ಷ ವಯಸ್ಸಾಗಿತ್ತು.
ಪ್ರದೀಪ್ ಶೆಟ್ಟರ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಬೆಳಗ್ಗೆ 11ಕ್ಕೆ ಅಂತ್ಯಕ್ರಿಯೆ ಜರುಗಲಿದೆ.