ತ್ಯಾಗ, ಬಲಿದಾನದಿಂದ ಸಮಾಜ ಪ್ರಗತಿಯತ್ತ

27-11-Shiva-3
ರಾಯಚೂರಿನ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಐಡಿಎಸ್‌ಒದಿಂದ ಸೋಮವಾರ ಏರ್ಪಡಿಸಿದ್ದ ರಾಯಚೂರು, ಯಾದಗಿರಿ ಜಿಲ್ಲಾ ಮಟ್ಟದ ಯುವಜನ ಶಿಬಿರದಲ್ಲಿ ಸಂಘಟನೆ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಮಾತನಾಡಿದರು. ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಉಪಾಧ್ಯಕ್ಷ ತಿರುಪತಿ ಗೋನವಾರ ಇದ್ದರು.
Published on

ರಾಯಚೂರು: ಕಾಲ ಕಾಲಕ್ಕೆ ಸಮಾಜದಲ್ಲಿ ಬಿಕ್ಕಟ್ಟುಗಳು ಸೃಷ್ಠಿಯಾದಾಗ ಬಿಕ್ಕಟ್ಟುಗಳನ್ನು ಪರಿಹರಿಸಲು ಮಹಾನ್ ವ್ಯಕ್ತಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಹಲವಾರು ಜನರು ತಮ್ಮ ತ್ಯಾಗ, ಬಲಿದಾನಗಳ ಮೂಲಕ ಸಮಾಜವನ್ನು ಪ್ರಗತಿಯೆಡೆಗೆ ತೆಗೆದುಕೊಂಡು ಹೋಗಲು ಶ್ರಮಿಸಿದ್ದಾರೆ ಎಂದು ಎಐಡಿವೈಒ ರಾಜ್ಯ ಕಾರ್ಯದರ್ಶಿ ಸಿದ್ಧಲಿಂಗ ಬಾಗೇವಾಡಿ ಹೇಳಿದರು.
ಸ್ಥಳೀಯ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಎಐಡಿವೈಒದಿಂದ ಸೋಮವಾರ ಏರ್ಪಡಿಸಿದ್ದ ರಾಯಚೂರು, ಯಾದಗಿರಿ ಜಿಲ್ಲಾ ಮಟ್ಟದ ಯುವಜನ ಶಿಬಿರದಲ್ಲಿ ಮಾತನಾಡಿ, ಯಾರೂ ಹುಟ್ಟಿನಿಂದಲೇ ಮಹಾನ್ ವ್ಯಕ್ತಿಗಳಾಗಲಿಲ್ಲ. ಅವರ ನಿರಂತರ ಹೋರಾಟ, ಜನರ ಪ್ರೀತಿಯಿಂದ ಮಹಾನ್ ವ್ಯಕ್ತಿಗಳಾಗಿದ್ದಾರೆ ಎಂದರು.
ಸಮಾಜದಲ್ಲಿನ ಮೂಢ ನಂಬಿಕೆ, ಬಾಲ್ಯ ವಿವಾಹ, ಕಂದಾಚಾರಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಹಲವಾರು ಜನರು ಸಮಾಜಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿಟ್ಟಿದ್ದರು. ಗೌತಮ ಬುದ್ಧನಿಂದ ಹಿಡಿದು ಗಾಂೀಜಿ, ಜ್ಯೋತಿಬಾ ುಲೆ, ನೇತಾಜಿ ಸುಭಾಶ್ಚಂದ್ರ ಬೋಸ್ ಸೇರಿದಂತೆ ಹಲವರ ಹೋರಾಟ ಅವಿಸ್ಮರಣೀಯ ಎಂದು ಹೇಳಿದರು.
ಸಂಘಟನೆ ಜಿಲ್ಲಾ ಕಾರ್ಯದರ್ಶಿ ವಿನೋದಕುಮಾರ ಮಾತನಾಡಿ, ಯುವಜನರನ್ನು ವೈಚಾರಿಕವಾಗಿ ಜಾಗೃತಗೊಳಿಸಲು ಹಾಗೂ ಅವರಲ್ಲಿ ಉನ್ನತ ನೀತಿ ಸಂಸ್ಕೃತಿಯನ್ನು ಉದ್ದೀಪನಗೊಳಿಸಲು ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಚನ್ನಬಸವ ಜಾನೇಕಲ್, ಉಪಾಧ್ಯಕ್ಷ ತಿರುಪತಿ ಗೋನವಾರ, ಪದಾಕಾರಿಗಳಾದ ಅಭಿಲಾಷ ಅಲಬನೂರು, ಯಲ್ಲಪ್ಪ ದೊರೆ, ವೌನೇಶ, ಕೃಷ್ಣ, ವೌನೇಶ ನಾಯಕ, ಮರಿಲಿಂಗ, ಪಂಪನಗೌಡ, ಶಿವಪ್ಪ ಅಸ್ಕಿಹಾಳ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net