ಯುವಪೀಳಿಗೆಯಲ್ಲಿ ರಾಷ್ಟ್ರಪ್ರೇಮ ಬೆಳೆಸಲು ಮಣ್ಣು ಸಂಗ್ರಹ: ತಾಪಂ ಇಒ ಹೇಳಿಕೆ

COUNTRY
ಕನಕಗಿರಿ ತಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮದಲ್ಲಿ ತಾಪಂ ಇಒ ಚಂದ್ರಶೇಖರ ಅವರೊಂದಿಗೆ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಮಡಿಕೆಗೆ ಮಣ್ಣು ಹಾಕಿದರು.
Published on

ಕನಕಗಿರಿ: ತ್ಯಾಗ ಮತ್ತು ಬಲಿದಾನದ ಮೂಲಕ ಪಡೆದ ಸ್ವಾತಂತ್ರೃಕ್ಕೀಗ 75 ವರ್ಷಗಳಾಗಿದ್ದು, ಯುವಪೀಳಿಗೆಗೆ ರಾಷ್ಟ್ರಪ್ರೇಮ ಬೆಳೆಸಲು ಇಲ್ಲಿನ ಮಣ್ಣನ್ನು ಸಂಗ್ರಹಿಸಿ ರಾಷ್ಟ್ರ ರಾಜಧಾನಿಗೆ ಕಳುಹಿಸಲಾಗುತ್ತಿದೆ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರು ಹೇಳಿದರು.

ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನೆಹರು ಯುವ ಕೇಂದ್ರದ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು, ನನ್ನ ದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ದೇಶಕ್ಕೆ ಸ್ವಾತಂತ್ರೃ ದೊರೆತು 75 ವರ್ಷ ಪೂರ್ಣಗೊಂಡ ಸವಿನೆನಪಿಗಾಗಿ ಪ್ರತಿ ಗ್ರಾಪಂನಿಂದ ಮಣ್ಣು ಸಂಗ್ರಹಿಸುವ ಮೂಲಕ ಜನರಲ್ಲಿ ಮಣ್ಣು ಮತ್ತು ದೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ನಮ್ಮ ದೇಶ ಉತ್ತಮ ಪರಿಸರ, ಹವಾಮಾನ ಹೊಂದಿರಲು ಇಲ್ಲಿನ ಮಣ್ಣಿನ ಗುಣ ಮುಖ್ಯ ಎಂದರು.
ತಾಲೂಕಿನ 11 ಗ್ರಾಪಂಗಳಿಂದ ಮಣ್ಣನ್ನು ಸಂಗ್ರಹಿಸಿ ತರಲಾಗಿತ್ತು. ಕಾರ್ಯಕ್ರಮ ಹಿನ್ನೆಲೆಯಲ್ಲಿ ವೃತ್ತಾಕಾರವಾಗಿ ನನ್ನ ಮಣ್ಣು, ನನ್ನ ದೇಶ ಎನ್ನುವ ಸಂದೇಶ ಸಾರುವ ಚಿತ್ರ ಗಮನಸೆಳೆಯಿತು.

ಸಹಾಯಕ ನಿರ್ದೇಶಕರಾದ ವೀರಣ್ಣ ನಕ್ರಳ್ಳಿ, ತಾಲೂಕು ಯೋಜನಾಧಿಕಾರಿ ರಾಜಶೇಖರ್, ಪಿಡಿಒಗಳಾದ ಸುರೇಶ, ಸಂಶೀರ್ ಅಲಿ, ಆನಂದ್ ಕೊಳ್ಳಿ, ಮಲ್ಲಿಕಾರ್ಜುನ, ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್‌ಕಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net