

ಶಿರಹಟ್ಟಿ: ತ್ಯಾಗ, ಬಲಿದಾನ ಹಾಗೂ ಸಮಾನತೆಯ ಸಂದೇಶ ಸಾರುವ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಸೋಮವಾರ ಹರಿಪೂರ ಈದ್ಗಾ ಮೈದಾನದಲ್ಲಿ ಶ್ರದ್ಧಾ ಭಕ್ತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಲ್ಲಾಹನ ಕೃಪೆಗೆ ಪಾತ್ರರಾದರು.
ಈ ವೇಳೆ ಈದ್ ಸಂದೇಶ ನೀಡಿದ ಜಾಮಿಯಾ ಮಸೀದಿ ಮೌಲಾನಾ ಮಜಹರ್ಖಾನ್ ಪಠಾಣ, ತಿಂಗಳ ಪರ್ಯಂತದ ಉಪವಾಸ ಆಚರಣೆಯ ಪವಿತ್ರ ರಮಜಾನ್ ಮತ್ತು ತ್ಯಾಗ, ಬಲಿದಾನ ಪ್ರತೀಕದ ಬಕ್ರೀದ್ ಇವೆರಡು ಕುರಾನ್ ಅವತರಣಿಕೆಯಲ್ಲಿನ ಮುಸ್ಲಿಮರ ಪಾಲಿಗೆ ಧರ್ಮದ ಮಾರ್ಗದಲ್ಲಿ ಬದುಕಿನ ಪಾಠ ಕಲಿಸುವ ಹಬ್ಬಗಳು ಎಂದರು.
ಇಂದು ವಿಶ್ವದಾದ್ಯಂತ ಲಕ್ಷಾಂತರ ಭಕ್ತರು ಮೆಕ್ಕಾದಲ್ಲಿ ಪವಿತ್ರ ಹಜ್ ಯಾತ್ರೆಯ ವಿಶೇಷ ಪ್ರಾರ್ಥನೆ ಸಲ್ಲಿಸಿ ಅಲ್ಲಾಹನ ಸಂಪ್ರೀತಿಗೆ ಪಾತ್ರರಾಗುತ್ತಾರೆ. ಇಂದಿನ ದಿನ ತ್ಯಾಗ ಸಂಕೇತವಾಗಿ ಬಲಿ ರೂಪದಲ್ಲಿ ನೀಡುವ ಪ್ರಾಣಿ ಕುರಬಾನಿ ಮಹತ್ವ ಪಡೆದಿದೆ ಎಂದರು,
ಸತ್ಯ, ಶುದ್ಧ ಕಾಯಕ ಸಂಪಾದನೆಯಿಂದ ಕೂಡಿಟ್ಟ ಹಣ, ಚಿನ್ನ, ಬೆಳ್ಳಿ ಮಾನದಂಡ ಆಧರಿಸಿ ಕುರಬಾನಿ ನೀಡುವ ಪದ್ಧತಿ ಬೆಳೆದು ಬಂದಿದೆ. ಮುಖ್ಯವಾಗಿ ಅಲ್ಲಾಹ್ ದಯಪಾಲಿಸಿದ ಕಲಮಾ, ನಮಾಜ್, ರೋಜಾ, ಜಕಾತ್, ಹಜ್ ಪಂಚ ಕರ್ವದಿಗಳನ್ನು ಪಾಲಿಸಿದಾಗ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದರು.
ಸಾಮೂಹಿಕ ಪ್ರಾರ್ಥನೆಯ ಬಳಿಕ ಮುಸ್ಲಿಮರು ಆಲಿಂಗನದೊಂದಿಗೆ ಈದ್ ಶುಭಾಶಯ ಕೋರಿದರು.
ಮೌಲಾನ್ ಅಬ್ದುಲ್ಲತೀಫ ಮಕಾನದಾರ, ಮಹ್ಮದ್ಖುರೇಶಿ ಮನಿಯಾರ, ಅಬ್ದುಲ್ ಗಫಾರ ರಜಾಕಿ, ಇರ್ಫಾನ ಮನಿಯಾರ, ಹಾಜಿ ಅಬ್ದುಲ್ಗನಿ ಕುಬಸದ, ಮಹ್ಮದ್ಗೌಸ ಕುಬಸದ, ಹುಮಾಯೂನ್ ಮಾಗಡಿ, ಮಾಬುಸಾಬ ಕುಬಸದ, ಕಾಶೀಮಶಾ ಮಕಾನದಾರ, ಮಹ್ಮದ್ಇಸಾಕ ಆದ್ರಳ್ಳಿ, ಆಶ್ರತ ಢಾಲಾಯತ, ಬುಡನ್ಶಾ ಮಕಾನದಾರ, ನಜೀರ ಡಂಬಳ. ಶೌಕತಲಿ ಮನಿಯಾರ, ಎಂ.ಎ. ಮಕಾನದಾರ, ಬಾಬುಸಾಬ ಮಾಚೇನಹಳ್ಳಿ, ಶೌಕತಲಿ ಬುವಾಜಿ, ರಾಜೇಸಾಬ ಶಿಗ್ಲಿ, ಇಮಾಮಸಾಬ ಮುಳಗುಂದ, ಬಾಬಾಜಾನ ಕೋಳಿವಾಡ, ರಫೀಕ ಆದ್ರಳ್ಳಿ, ಗೌಸಪೀರ ಮಕಾನದಾರ, ಸುಭಾನಸಾಬ ಒಂಟಿ, ಸಿಕಂದರ ಟಪಾಲ, ಎ.ಎ. ಅತ್ತಾರ, ಇತರರಿದ್ದರು.