

ಚಿಕ್ಕಮಗಳೂರು: ತ್ಯಾಗ, ತಪಸ್ಸು, ಅಹಿಂಸೆಯೇ ಜೈನ ಧರ್ಮದ ಮೂಲ ಉz್ದÉÃಶ ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ನಗರದ ತೇರಾಪಂಥ್ ಭವನದಲ್ಲಿ ಆಚಾರ್ಯ ಶ್ರೀ ಮಹಾಶ್ರಮಣ್ ಅವರ ಶಿಷ್ಯರಾದ ಮುನಿಶ್ರೀ ಮೋಹಜಿತ್ ಕುಮಾರ್‌ಜಿ, ಭವ್ಯಕುಮಾರ್‌ಜಿ, ಜಹೇಶ್‌ಕುಮಾರ್‌ಜಿ ಅವರ ನೇತೃತ್ವದಲ್ಲಿ ಆಯೋಜಿಸಲಾದ ಉಪವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಜೈನ ಸಮಾಜದಲ್ಲಿ ಶ್ವೇತಾಂಬರರು, ದಿಗಂಬರರು ಎಂಬ ಎರಡು ಧರ್ಮದ ಇಬ್ಬರು ಗುರುಗಳಿದ್ದು, ಇಂದು ಶ್ವೇತಾಂಬರ ಗುರುಗಳು ಆಗಮಿಸಿದ್ದು ಅವರ ಸಮ್ಮುಖದಲ್ಲಿ ೩೧ ದಿನ ಉಪವಾಸವಿದ್ದು ವ್ರತ ಆಚರಣೆ ಮಾಡುತ್ತಿರುವ ಜಸ್ವಂತ್‌ಜೋಶಿ ಅವರಿಗೆ ಅಭಿನಂದನೆಗಳು ಎಂದರು.
ಜೈನ ಧರ್ಮದ ಮೂಲ ಉz್ದÉÃಶಗಳಾದ ತ್ಯಾಗ, ತಪಸ್ಸು, ಅಹಿಂಸೆ ಎಂಬ ಮೂಲ ಆಶÀಯವನ್ನಿಟ್ಟುಕೊಂಡ ಜೈನ ಮುನಿಗಳು ಪ್ರಪಂಚದಾದ್ಯAತ ಪ್ರವಾಸ ಮಾಡುವ ಮೂಲಕ ಅವರ ವಿಚಾರ ಧಾರೆಗಳನ್ನು ಎಲ್ಲೆಡೆ ತಲುಪಿಸುತ್ತಿದ್ದಾರೆ ಎಂದು ಹೇಳಿದರು.
ಮುನಿಶ್ರೀ ಮೋಹಜಿತ್ ಕುಮಾರ್‌ಜಿ ಅವರು ದೀಕ್ಷೆ ಪಡೆದು ನವೆಂಬರ್ ೭ಕ್ಕೆ ೫೦ ವರ್ಷ ತುಂಬುತ್ತಿರುವುದು ಸಂತೋಷವನ್ನು ತಂದಿದೆ. ಯಾವುದೇ ಧರ್ಮದಲ್ಲಾದರು ಸಹ ಧರ್ಮವನ್ನು ಪಾಲಿಸಿ ನಡೆಸಿಕೊಂಡು ಹೋಗುವುದು ಸುಲಭವಲ್ಲ ಎಂದರು.
ಜೈನ್ ಸಂಘವು ಜಿಲ್ಲೆಯ ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವುದರ ಜೊತೆಗೆ ಮಹಿಳಾ ಸಂಘವು ಸಾರ್ವಜನಿಕವಾಗಿ ಎಲ್ಲಾ ಧರ್ಮದ ಬಡವರಿಗು ಅನುಕೂಲ ಆಗುವಂತಹ ಅನೇಕ ಕೆಲಸವನ್ನು ಮಾಡಿಕೊಂಡು ಬಂದಿದ್ದಾರೆ. ತೇರಾಪಂಥ್ ಭವನದಲ್ಲಿ ನಡೆಸಲಾಗುತ್ತಿರುವ ಇಂತಹ ಕಾರ್ಯಕ್ರಮಗಳು ಮುಂದೆಯು ಸಹ ಯಶಸ್ವಿಯಾಗಿ ನಡೆಯಲಿ ಎಂದು ಹಾರೈಸಿದರು.
ಅಹಿಂಸೆ ಪಾಲನೆ ಮಾಡುವುದರಲ್ಲಿ ಜೈನಧರ್ಮ ಮೊದಲನೇ ಸಾಲಿನಲ್ಲಿ ಸೇರ್ಪಡೆಯಾಗುತ್ತದೆ. ವೈದ್ಯರ ಪ್ರಕಾರ ಉಪವಾಸವು ಆರೋಗ್ಯಕ್ಕೆ ಒಳ್ಳೆಯದು. ಆದರೆ ಉಪವಾಸ ಮಿತಿಯಲ್ಲಿ ಇರಬೇಕು ಎಂದು ಹೇಳಲಾಗುತ್ತದೆ ಎಂದರು.
ತೇರಾಪಂಥ್ ಸಭಾ ಅಧ್ಯಕ್ಷ ಮಹೇಂದ್ರ ಡೋಸಿ ಮಾತನಾಡಿ, ಜೈನ ಧರ್ಮದ ೨೪ನೇ ತೀರ್ಥಂಕರರಾದ ಮಹಾವೀರ್ ಮುನಿಜಿ, ತೇರಾಪಂಥ್ ಧರ್ಮ ಸಂಘದ ಸಂಸ್ಥಾಪಕ ಆಚಾರ್ಯರು, ೧೧ ನೇ ಆಚಾರ್ಯರಾದ ಮಹಾಶ್ರಮಣ್ , ಮುನಿಶ್ರೀ ಮೋಹಜಿತ್ ಕುಮಾರ್‌ಜಿ, ಭವ್ಯಕುಮಾರ್‌ಜಿ, ಜಹೇಶ್ ಕುಮಾರ್‌ಜಿ ಅವರ ನೇತೃತ್ವದಲ್ಲಿ ಜಸ್ವಂತ್ ಡೋಸಿ ಅವರು ೩೧ ದಿನ ಉಪವಾಸ ಮಾಡಲಾಗುತ್ತಿದೆ ಎಂದರು.
ಜೈನ ಧರ್ಮದಲ್ಲಿ ಉಪವಾಸಕ್ಕೆ ಬಹಳ ಮಹತ್ವವಿದ್ದು, ಉಪವಾಸ ಮಾಡುವಾಗ ನೀರು ಮಾತ್ರವೇ ಸೇವಿಸಲಾಗುವುದು. ನೀರನ್ನು ಹೊರತುಪಡಿಸಿ ಬೇರಾವ ಪದಾರ್ಥ ಸೇವಿಸುವುದಿಲ್ಲ. ಜಸ್ವಂತ್ ಡೋಸಿ ಅವರು ೩೧ ದಿನ ಉಪವಾಸ ಮಾಡುವ ಮೂಲಕ ಜೈನ ಧರ್ಮದಲ್ಲಿ ಕೀರ್ತಿಯನ್ನು ಸ್ಥಾಪಿಸಿದ್ದಾರೆ. ಅವರಿಗೆ ತೇರಾಪಂಥ್ ಸಭಾ ಹಾಗೂ ಸಂಘ ಸಂಸ್ಥೆಗಳಿAದ ತಪಸ್ಯಾ ಅನುಮೋದನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಶಾಲಿಮಠ್, ಪ್ರಮುಖರಾದ ಪಲ್ಲವಿ.ಸಿ.ಟಿ.ರವಿ, ತೇರಾಪಂಥ್ ಸಭಾ ಮಂತ್ರಿ ಪದಮ್‌ನಹಾರ್, ಅಶೋಕ್ ಡೋಸಿ, ತಾರಚಂದ್ ಶೇಠಿಯಾ ಮತ್ತಿತರರಿದ್ದರು.