ಯೋಧರ ತ್ಯಾಗ, ಬಲಿದಾನ ಸ್ಮರಣೀಯ

Sacrifice of soldiers is memorable
ಅಮೀನಗಡ ಸಮೀಪದ ಸೂಳೇಬಾವಿಯಲ್ಲಿ ಯುವ ಬ್ರಿಗೇಡ್ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು. ಪಿಎಸ್‌ಐ ಶಿವಾನಂದ ಸಿಂಗನ್ನವರ, ಶ್ರೀಧರ ನಿರಂಜನ, ಗ್ಯಾನಪ್ಪ ಗೋನಾಳ ಮೊದಲಾದವರಿದ್ದರು.
Published on

ಅಮೀನಗಡ: ಯೋಧರ ತ್ಯಾಗ ಹಾಗೂ ಬಲಿದಾನ ಸ್ಮರಿಸುವ ಮೂಲಕ ಪ್ರತಿಯೊಬ್ಬ ಯುವಕ ನಿಸ್ವಾರ್ಥ ಮನೋಭಾವದಿಂದ ಸೇನೆಗೆ ಸೇರಲು ಮುಂದಾಗಬೇಕು ಎಂದು ಪಿಎಸ್‌ಐ ಶಿವಾನಂದ ಸಿಂಗನ್ನವರ ಹೇಳಿದರು.

ಸಮೀಪದ ಸೂಳೇಬಾವಿಯಲ್ಲಿ ಯುವ ಬ್ರಿಗೇಡ್ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವದಲ್ಲಿ ಮಾತನಾಡಿದ ಅವರು, ಕಾರ್ಗಿಲ್ ಯುದ್ಧದಲ್ಲಿ ನಮ್ಮ ಭಾಗದ ಸೈನಿಕರು ಭಾಗಿಯಾಗಿದ್ದು, ನಮಗೆಲ್ಲ ಹೆಮ್ಮೆಯ ಸಂಗತಿ. ಯೋಧರ ದೇಶಪ್ರೇಮ ಹಾಗೂ ಶೌರ್ಯ ಯುವ ಜನಾಂಗಕ್ಕೆ ಸ್ಫೂರ್ತಿಯಾಗಿದೆ ಎಂದರು.

ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ವೀರಯೋಧ ಷಣ್ಮುಖಪ್ಪ ಮಡಿವಾಳರ ಅವರನ್ನು ಗೌರವಿಸಲಾಯಿತು. ಮುಖಂಡ ನಾಗೇಶ ಗಂಜಿಹಾಳ ಮಾತನಾಡಿದರು.

ಕಾರ್ಗಿಲ್ ವಿಜಯೋತ್ಸವ ಮೆರವಣಿಗೆ ಹಾಗೂ ರ‌್ಯಾಲಿ ಗ್ರಾಮದ ಭಾವೈಕ್ಯತಾ ಮಹಾದ್ವಾರದಿಂದ ಬನಶಂಕರಿ ದೇವಸ್ಥಾನ, ಗಾಂಧಿ ಸರ್ಕಲ್, ಸ್ವಾಮಿ ವಿವೇಕಾನಂದ ಶಾಲೆ, ಗ್ರಾಮ ಪಂಚಾಯಿತಿ, ಗಾಯತ್ರಿ ನಗರ ಮಾರ್ಗವಾಗಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕ ಶ್ರೀಧರ ನಿರಂಜನ, ಗ್ಯಾನಪ್ಪ ಗೋನಾಳ, ಜಗದೀಶ ಪಾಟೀಲ, ಆನಂದ ಮೊಕಾಶಿ, ಪರಶುರಾಮ ಹುಲ್ಯಾಳ, ಶಂಕರ ಮಿಣಚಗಿ, ಹನುಮಂತ ನಾವಿ, ಈರಪ್ಪ ಪರಾಳದ, ಹನುಮಂತ ಮಿಣಚಗಿ, ಯಮನೂರ ಹುಲ್ಯಾಳ, ಲಕ್ಷ್ಮಣ ಭಜಂತ್ರಿ, ವಿಶ್ವನಾಥ ಲೂತಿಮಠ, ಮುತ್ತಪ್ಪ ಹಡಪದ, ಸುರೇಶ ಪವಾರ, ಹನುಮಂತ ಘಂಟಿ, ಮಲ್ಲಪ್ಪ ಮಾಗಿ, ಶ್ರೀಶೈಲ ಹಿರೇಮಠ, ಲಕ್ಷ್ಮ್ಮಣ ಮೇಟಿ, ಮೌನೇಶ ಕಮ್ಮಾರ, ಪರಶುರಾಮ ಅಂಟರತಾನಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net