

ಸುಂಟಿಕೊಪ್ಪ: ಮಾದಾಪುರ ಸಮೀಪದ ಕುಂಬೂರುವಿನ ನೂತನವಾಗಿ ಲೋಕಾರ್ಪಣೆಗೊಂಡ ಪವಿತ್ರ ಕುಟುಂಬ ದೇವಾಲಯದಲ್ಲಿ ಭಾನುವಾರ ಪ್ರಥಮ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮಪ್ರಸಾದ ನೀಡಲಾಯಿತು.
ಹಟ್ಟಿಹೊಳೆ ಜಪಸರಮಾತೆ ದೇವಾಲಯದ ಧರ್ಮಗುರು ರೇ.ಫಾ.ಗಿಲ್ಬರ್ಟ್ ಡಿಸಿಲ್ವ, ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಸಹಾಯಕ ಧರ್ಮಗುರು ರೇ.ಪಾ.ನವೀನ್ ಕುಮಾರ್ ಹಾಗೂ ಪವಿತ್ರ ಕುಟುಂಬ ದೇವಾಲಯದ ಧರ್ಮಗುರು ರಾಜೇಶ್ ಆಡಂಬರ ಬಲಿಪೂಜೆ ಹಾಗೂ ಮಕ್ಕಳಿಗೆ ನೂತನ ಪರಮ ಪ್ರಸಾದ ನೀಡಿದರು.
ಮಾದಾಪುರ, ಸುಂಟಿಕೊಪ್ಪ, ಹಟ್ಟಿಹೊಳೆ ಮಡಿಕೇರಿ, ಸೋಮವಾರಪೇಟೆ ಸೇರಿದಂತೆ ವಿವಿಧೆಡೆಗಳಿಂದ ನೂರಾರು ಸಂಖ್ಯೆಯಲ್ಲಿ ಭಕ್ತರು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.