ಸಹಕಾರ ಸಂಘದಲ್ಲಿ ತ್ಯಾಗ, ಸಹಬಾಳ್ವೆ ಅಗತ್ಯ

pnh belli
ಸಿಂಗಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟನೆಯಲ್ಲಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಪಾಲ್ಗೊಂಡಿದ್ದರು. ನಾಗರಾಜಪ್ಪ, ಓಂಕಾರ್‌ಮೂರ್ತಿ, ರಮೇಶ್, ಪರಮೇಶ್ವರಪ್ಪ, ಡಿ.ಎಚ್.ಮಂಜಪ್ಪ ಇತರರಿದ್ದರು.
Published on

ಪಂಚನಹಳ್ಳಿ: ಸಂಘದಲ್ಲಿ ತ್ಯಾಗ, ಸಹಬಾಳ್ವೆ, ಸಹಕಾರದಿಂದ ಮಾತ್ರ ಬೆಳವಣಿಗೆ ಸಾಧ್ಯ ಎಂದು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಹೇಳಿದರು.

ಸಿಂಗಟಗೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ನಾನು ಸಂಘಕ್ಕೆ ಅಧ್ಯಕ್ಷನಾದ ಸಮಯದಲ್ಲಿ 84 ಸಾವಿರ ರೂ. ವಹಿವಾಟು ನಡೆದಿತ್ತು. ಸದ್ಯ 20 ಕೋಟಿ ರೂ. ವಹಿವಾಟಿಗೆ ತಲುಪಿದೆ. ಇದಕ್ಕೆ ಸಂಘದ ಪ್ರತಿಯೊಬ್ಬರೂ, ರೈತರ ಸಹಕಾರ ಮುಖ್ಯವಾಗಿರುತ್ತದೆ. ಸಹಕಾರ ಸಂಘದಲ್ಲಿ ಗುರಿ, ಉದ್ದೇಶ ಬಹಳ ಮುಖ್ಯ. ಇದಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸದಲ್ಲಿ ಸಂಘದ ಬೆಳವಣಿಗೆ ಸಾಧ್ಯ ಎಂದರು.
ಇತ್ತೀಚಿನ ದಿನಗಳಲ್ಲಿ ಸಂಘದಲ್ಲಿ ಠೇವಣಿ ಇಡುವವರ ಸಂಖ್ಯೆ ಕಡಿಮೆಯಾಗುತ್ತಿದ್ದು ಸಾಲದ ಬೇಡಿಕೆ ಹೆಚ್ಚಾಗುತ್ತಿದೆ. ಠೇವಣಿ ಮತ್ತು ಸಾಲದ ವಹಿವಾಟುಗಳಲ್ಲಿ ಹೊಂದಾಣಿಕೆ ಬಂದಲ್ಲಿ ಮಾತ್ರ ಸಂಘ ಅಭಿವೃದ್ಧಿ ಹೊಂದುತ್ತದೆ. ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಸಂಘದ ಸುಮಾರು 6.30 ಕೋಟಿ ರೂ. ರೈತರ ಸಾಲ ಮನ್ನಾವಾಗಿದೆ. ಮುಂದಿನ ವರ್ಷ ನೂತನ ಕಟ್ಟಡ ನಿರ್ಮಿಸಿ ಅದೇ ಕಟ್ಟಡದಲ್ಲಿ ವಾರ್ಷಿಕ ಸಭೆ ನಡೆಸಲು ಅಪೆಕ್ಸ್ ಬ್ಯಾಂಕ್‌ನಿಂದ 25 ಲಕ್ಷ ರೂ. ಅನುದಾನ ನೀಡುತ್ತೇನೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪಿ.ವಿ.ಪವನ್ ಮಾತನಾಡಿ, 1750 ಷೇರುದಾರರನ್ನು ಒಳಗೊಂಡ ಸಂಘ ಈ ವರ್ಷ 26 ಲಕ್ಷ ರೂ. ಲಾಭಗಳಿಸಿದ್ದು, 12.65 ಕೋಟಿ ಸಾಲ ನೀಡಿದೆ. 1.60 ಕೋಟಿ ಠೇವಣಿ ಇದೆ ಎಂದು ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ನಾಗರಾಜಪ್ಪ, ನಿರ್ದೇಶಕರಾದ ಓಂಕಾರ್‌ಮೂರ್ತಿ, ರಮೇಶ್, ವಿಶ್ವನಾಥ್, ಎಸ್.ಕೆ.ರಮೇಶ್, ಕೆ.ಕುಮಾರ್, ಎಚ್.ಕೆ.ಕುಮಾರಪ್ಪ, ಪರಮೇಶ್ವರಪ್ಪ, ಡಿ.ಎಚ್.ಮಂಜಪ್ಪ, ಸುಮಾ, ಶೋಭಾ, ಸಿಇಒ ಆರ್.ರವಿ, ಬಿ.ಪಿ.ದೇವಾನಂದ್, ಸೀಗೆಹಡ್ಲು ಹರೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net