ಕೊಬ್ಬರಿ ಖರೀದಿಗಿಲ್ಲ ಗೋಣಿಚೀಲ!

coconuts
coconuts
Published on

ಲೋಕಸಭಾ ಚುನಾವಣೆ ಎಫೆಕ್ಟ್​? | ಎರಡು ದಿನ ನೆಡ್​ ಸ್ಥಗಿತ

ತುಮಕೂರು/ತಿಪಟೂರು: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಕೊಬ್ಬರಿ ಖರೀದಿಸುತ್ತಿರುವ ಕೇಂದ್ರಗಳಲ್ಲಿ ಗೋಣಿಚೀಲಕ್ಕೆ ಅಭಾವ ಎದುರಾಗಿದ್ದು, ಎರಡು ದಿನ ಕಡ್ಡಾಯ ರಜೆ ೂಷಿಸಿರುವುದು ರೈತರ ಆತಂಕ ಹೆಚ್ಚಿಸಿದೆ.
ಜಿಲ್ಲೆಯ ಕೊಬ್ಬರಿ ಖರೀದಿ ಕೇಂದ್ರಗಳಲ್ಲಿ ಗೋಣಿಚೀಲದ ಅಭಾವದ ಕಾರಣಕ್ಕೆ ಮೇ 24 ಹಾಗೂ 25ರಂದು ಖರೀದಿ ಪ್ರಕ್ರಿಯೆ ಸ್ಥಗಿತಗೊಳಿಸಲಾಗಿದೆ. ಈ ದಿನಾಂಕದಂದು ಕೊಬ್ಬರಿ ತರಲು ಸೂಚಿಸಿರುವ ರೈತರಿಂದ ಜ್ಯೇಷ್ಠತೆಯ ಆಧಾರದಲ್ಲಿಯೇ ಮೇ 27 ಮತ್ತು 28ರಂದು ಖರೀದಿಗೆ ಬರುವಂತೆ ಮರು ದಿನಾಂಕ ನಿಗದಿಗೊಳಿಸಲಾಗಿದೆ.
ತುಮಕೂರು ಜಿಲ್ಲೆಯಲ್ಲಿ ರಾಜ್ಯ ಕೃಷಿ ಮಾರಾಟ ಮಂಡಳಿ ಖರೀದಿ ಕೇಂದ್ರಗಳ ನೋಡಲ್​ ಏಜೆನ್ಸಿಯಾಗಿದ್ದು, ಉಂಡೆಕೊಬ್ಬರಿ ಶೇಖರಿಸಲು ಅಗತ್ಯವಾದ ಗೋಣಚೀಲ ಸರಬರಾಜು ಮಾಡಲು ವಿಳಂಬ ಮಾಡಿರುವುದು ಈ ಸಮಸ್ಯೆ ತಂದೊಡ್ಡಿದೆ. ಖರೀದಿ ಕೇಂದ್ರಗಳಿಗೆ ಅಗತ್ಯವಾದ ಗೋಣಿಚೀಲಗಳನ್ನು ಕೋಲ್ಕತ್ತ ನಗರದಿಂದ ನಫೆಡ್​ ಸಂಸ್ಥೆಗೆ ಸರಬರಾಜು ಮಾಡಬೇಕಿದೆ. ಜಿಲ್ಲೆಯ 28 ಖರೀದಿ ಕೇಂದ್ರಗಳಲ್ಲಿಯೂ ಗೋಣಿಚೀಲಕ್ಕೆ ಸಮಸ್ಯೆಯಿದ್ದರೂ ತಿಪಟೂರು ಎಪಿಎಂಸಿ ಮಾತ್ರ ಮುನ್ನೆಚ್ಚರಿಕೆ ವಹಿಸಿ ರೈತರಿಗೆ ಸಕಾಲದಲ್ಲಿ ಮಾಹಿತಿ ನೀಡಿದೆ. ಏಪ್ರಿಲ್​ 1ರಿಂದ ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ನಫೆಡ್​ ಹಾಗೂ ರಾಜ್ಯ ಕೃಷಿ ಮಾರಾಟ ಮಂಡಳಿ ಸಹಯೋಗದಲ್ಲಿ ಕೊಬ್ಬರಿ ಖರೀದಿ ಮಾಡಿಕೊಳ್ಳಲಾಗುತ್ತಿದೆ. ತಿಪಟೂರು ತಾಲೂಕಿನಲ್ಲಿಯೇ 8 ಖರೀದಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಕೊಬ್ಬರಿ ಖರೀದಿ ಆರಂಭವಾಗಿ ಎರಡು ತಿಂಗಳು ಕಳೆದರೂ ಮಾರುಕಟ್ಟೆಯಲ್ಲಿ ಕೊಬ್ಬರಿ ದರ ಹೆಚ್ಚಳವಾಗದಿರುವುದು ರೈತರಿಗೆ ಕುತೂಹಲ ಮೂಡಿಸಿದೆ.
ತಿನ್ನಲು ರುಚಿಯಾಗಿರುವ ತಿಪಟೂರು ಭಾಗದ ಉಂಡೆ ಕೊಬ್ಬರಿಗೆ ಉತ್ತರ ಭಾರತವೇ ಪ್ರಮುಖ ಮಾರುಕಟ್ಟೆ ಎನ್ನಿಸಿದ್ದು, ಬಿಸಿಲಿನ ಕಾರಣಕ್ಕೆ ಬೇಡಿಕೆ ಕಡಿಮೆಯಾಗಿರಬಹುದು ಎಂಬ ಮಾತಿದೆ. ಆದರೆ, ಮಾರುಕಟ್ಟೆಯಲ್ಲಿ ವ್ಯಾಪಾರಿಗಳು ಉದ್ದೇಶಪೂರ್ವಕವಾಗಿಯೇ ಟೆಂಡರ್​ನಲ್ಲಿ ಭಾಗವಹಿಸದೆ ದರವನ್ನು ಯಥಾಸ್ಥಿತಿಯಲ್ಲಿ ಇಟ್ಟುಕೊಂಡಿದ್ದಾರೆ ಎಂಬ ಮಾತೂ ಎಪಿಎಂಸಿ ಆವರಣದಲ್ಲಿದೆ.
ದೇಶದೆಲ್ಲೆಡೆ ಬೇಸಿಗೆಯ ಝಳ ಕಡಿಮೆಯಾಗಿದ್ದು, ಉತ್ತರ ಭಾರತದಲ್ಲಿ ಹಬ್ಬಗಳೂ ಆರಂಭವಾಗಲಿವೆ. ಹಾಗಾಗಿ, ಕೊಬ್ಬರಿಗೆ ಬೇಡಿಕೆ ಸೃಷ್ಟಿಯಾಗಿ ಮಾರುಕಟ್ಟೆಯಲ್ಲಿಯೂ ಬೆಲೆ ಹೆಚ್ಚಳದ ನಿರೀಕ್ಷೆಯಿದೆ. ಆದಾಗ್ಯೂ ದರ ಹೆಚ್ಚಳವಾಗದಿದ್ದರೆ ವ್ಯಾಪಾರಿಗಳೇ ಉದ್ದೇಶಪೂರ್ವಕವಾಗಿ ಬೆಲೆ ಹೆಚ್ಚಳವಾಗದಂತೆ ನೋಡಿಕೊಂಡಿದ್ದಾರೆ ಎಂಬುದು ದೃಢವಾಗಲಿದೆ.

ಪಶ್ಚಿಮ ಬಂಗಾಳ ಎಲೆಕ್ಷನ್​ ಪರಿಣಾಮ!
ಕೋಲ್ಕತ್ತದಿಂದ ಗೋಣಿ ಚೀಲ ಸರಬರಾಜು ಮಾಡಬೇಕಿದ್ದು, ಪಶ್ಚಿಮ ಬಂಂಗಾಳ ಸೇರಿದಂತೆ ಉತ್ತರ ಭಾರತದ ರಾಜ್ಯದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿರುವ ಕಾರಣ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರಿದೆ. ಜಿಲ್ಲೆಗೆ ಅಗತ್ಯವಾದ ಗೋಣಿಚೀಲಗಳನ್ನು ಸರಬರಾಜು ಮಾಡಲು ನಫೆಡ್​ ಮೂಲಕ ಟೆಂಡರ್​ ಪಡೆದಿರುವ ಗುತ್ತಿಗೆದಾರ ಮುಂದಿನ ಒಂದೆರಡು ದಿನದಲ್ಲಿ ಗೋಣಿಚೀಲ ಸರಬರಾಜು ಮಾಡುವ ಭರವಸೆ ನೀಡಿದ್ದು, ಮೇ 25ರಿಂದ ಖರೀದಿ ಪ್ರಕ್ರಿಯೆ ಎಂದಿನಂತೆ ನಡೆಯುವ ವಿಶ್ವಾಸವಿದೆ.

ಏ.12ರವರೆಗಿನ ಪ್ರೋತ್ಸಾಹಧನ ಬಿಡುಗಡೆ
ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ 12 ಸಾವಿರ ರೂ. ಜತೆಗೆ ರಾಜ್ಯ ಸರ್ಕಾರ ೂಷಿಸಿರುವ 1500 ರೂ. ಪ್ರೋತ್ಸಾಹಧನ ಮೊದಲ ಕಂತು ಬಿಡುಗಡೆಯಾಗಿದೆ. ರಾಜ್ಯದ 17 ಜಿಲ್ಲೆಗಳಲ್ಲಿ ಕೊಬ್ಬರಿ ಖರೀದಿ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿ ಮೂಲಕ ಖರೀದಿಸುತ್ತಿರುವ ತುಮಕೂರು ಹಾಗೂ ಮೈಸೂರು ಜಿಲ್ಲೆಯ ರೈತರಿಗೆ ಏ.1ರಿಂದ 12ರ ವರೆಗೆ ಖರೀದಿಸಿದ ಕೊಬ್ಬರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಲಾಗಿದೆ. ಕೊಬ್ಬರಿ ಮಾರಾಟ ಮಾಡಿದ ರೈತರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ ಹಣ ವರ್ಗಾವಣೆಯಾಗಿದ್ದು, ಕ್ವಿಂಟಾಲ್​ ಕೊಬ್ಬರಿಗೆ 13500 ರೂ. ಸಿಕ್ಕಂತಾಗಿದೆ. ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಕೂಡ ಏ.28ರ ವರೆಗೂ ರೈತರ ಖಾತೆಗೆ ಬಂದಿದ್ದು, ಆ ನಂತರ ಕೊಬ್ಬರಿ ಮಾರಾಟ ಮಾಡಿದ ರೈತರು ಹಣಕ್ಕಾಗಿ ಕಾದಿದ್ದಾರೆ.

ತಿಪಟೂರು ಖರೀದಿ ಕೇಂದ್ರ ಸಂಖ್ಯೆ 03. 3ಎ. ಮತ್ತು 3ಬಿ. ಗಳಲ್ಲಿ ಎಂದಿನಂತೆ ರೈತರಿಂದ ಕೊಬ್ಬರಿ ಖರೀದಿ ನಡೆಯಲಿದೆ. ಕಿಬ್ಬನಹಳ್ಳಿ ಕಾಸ್​ ಖರೀದಿ ಕೇಂದ್ರ ಸಂಖ್ಯೆ 01ರಲ್ಲಿ ಮೇ 24ರಂದು ಮಾತ್ರ ರೈತರಿಂದ ಕೊಬ್ಬರಿ ಖರೀದಿ ನಡೆಯಲಿದೆ. ಇನ್ನುಳಿದ ಎಲ್ಲ ಕೇಂದ್ರಗಳಲ್ಲಿಯೂ ಎರದು ದಿನ ರಜೆ ಮಾಡಲಾಗಿದೆ. ಎಸ್​.ಬಿ.ನ್ಯಾಮಗೌಡ ಕಾರ್ಯದರ್ಶಿ ತಿಪಟೂರು ಎಪಿಎಂಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net