ರಾಜು ಕಪನೂರ ಗೆಳೆಯರಿಂದಲೇ ೬೦ ಲಕ್ಷ ರೂ. ಪಡೆದುಕೊಂಡಿದ್ದ ದಲಿತ ಮುಖಂಡರ ಪ್ರತ್ಯಾರೋಪ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ಬೀದರ್ ಜಿಲ್ಲೆಯ ಗುತ್ತಿಗೆದಾರ ಸಚಿನ್ ಆತ್ಮಹತ್ಯೆಗೆ ಹಣದ ಬೇಡಿಕೆ ಇಟ್ಟು ಕೊಲೆ ಬೆದರಿಕೆ ಹಾಕಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಈಗ ಆತನೇ ರಾಜು ಕಪನೂರ ಇನ್ನಿತರ ಬಳಿ ಹಣ ಪಡೆದುಕೊಂಡಿದ್ದ ಎಂಬ ಆರೋಪವನ್ನು ದಲಿತ ಮುಖಂಡರು ಮಾಡಿದ್ದಾರೆ. ಇದರಿಂದಾಗಿ ಪಂಚಾಳ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಈ ಬೆಳವಣಿಗೆ ನಡುವೆ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿಕೊಟ್ಟಿದೆ.
ಸಚಿನ ಪಾಂಚಾಳ ಗುತ್ತಿಗೆದಾರನೇ ಅಲ್ಲ, ಬೇರೊಬ್ಬರ ಲೈಸೆನ್ಸ್ನಿಂದ ಕೆಲಸ ಮಾಡುತ್ತಿದ್ದ. ನಕಲಿ ಟೆಂಡರ್‌ಗಳು, ನಕಲಿ ಗುತ್ತಿಗೆದಾರಿಕೆ ನಡೆದಿವೆ. ರಾಜು ಕಪನೂರ ಗೆಳೆಯರ ಬಳಿ ೬೦ ಲP್ಷÀ ಹಣ ಪಡೆದಿದ್ದು, ವಾಪಸ್ ಕೇಳಿದ್ದಾರೆ. ಅದಕ್ಕೆ ಡೆತ್‌ನೋಟ್‌ನಲ್ಲಿ ಹೆಸರು ಪ್ರಸ್ತಾಪಿಸಲಾಗಿದೆ. ಈ ವಾಸ್ತವ ಅರಿತುಕೊಂಡು ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುವುದು ಕೈಬಿಡಬೇಕು ಎಂದು ದಲಿತ ಸಮನ್ವಯ ಸಮಿತಿ ಮುಖಂಡರು ಎಚ್ಚರಿಸಿದರು.
ಮುಖಂಡರಾದ ವಿಠ್ಠಲ್ ದೊಡ್ಡಮನಿ,ಅರ್ಜುನ ಭದ್ರೆ,ಎ.ಬಿ.ಹೊಸಮನಿ, ಪ್ರಕಾಶ ಮೂಲಭಾರತಿ, ಮಲ್ಲಪ್ಪ ಹೊಸಮನಿ,ಪವನಕುಮಾರ ವಳಕೇರಿ ಇತರರು ಸೋಮವಾರ ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿ,ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ಅನಾವಶ್ಯಕ ರಾಜಕೀಯ ಮಾಡುತ್ತಿದ್ದು, ರಾಜು ಕಪನೂರ ಬಳಿ ಹಣ ಪಡೆದವನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್‌ನ ಬಗ್ಗೆಯೇ ಅನುಮಾನಗಳು ಇವೆ. ಇಡೀ ಪ್ರಕರಣದಲ್ಲಿ ಇಬ್ಬರ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ರೂಪಿಸಲಾಗಿದೆ ಎಂದು ದಲಿತ ಸಮನ್ವಯ ಸಮಿತಿ ಮುಖಂಡರು ಕಿಡಿಕಾರಿದರು.
ಆತ್ಮಹತ್ಯೆ ಪ್ರಕರಣದಲ್ಲಿ ದಲಿತ ಸಚಿವ ಪ್ರಿಯಾಂಕ್ ಖರ್ಗೆ ಅವರ ರಾಜಕೀಯ ಜೀವನ ಅಂತ್ಯಕ್ಕೆ ಬಿಜೆಪಿ ಯತ್ನಿಸುತ್ತಿದೆ. ಸುಳ್ಳು ಆರೋಪ ಮಾಡಿ, ಪ್ರಭಾವಿ ರಾಜಕಾರಣಿಯಾಗಿ ಗುರುತಿಸಿಕೊಂಡ ಪ್ರಿಯಾಂಕ್ ಖರ್ಗೆ ಹೆಸರಿಗೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಬಿಜೆಪಿ ನಾಯಕರು ಸಚಿವ ಖರ್ಗೆ ವಿರುದ್ಧ ಮಾತಾಡುವುದು ಬಿಡಲಿ. ಸತ್ಯಾಸತ್ಯತೆ ಅರಿಯಲು ತನಿಖೆ ನಡೆಯಲಿ ಎಂದು ಒಕ್ಕೋರಲಿನಿಂದ ಆಗ್ರಹಿಸಿದರು.
=====