ಅಧ್ಯಯನಕ್ಕೆ ವಿದ್ಯಾರ್ಥಿ ಮಿತ್ರ ಸಹಕಾರಿ

oplus_1024
oplus_1024
Published on

ಅಕ್ಕಿಆಲೂರ:  ಮಕ್ಕಳ ಜತೆ ಶಿಕ್ಷಕರು ಅಧ್ಯಯನಶೀಲರಾಗಲು ವಿಜಯವಾಣಿ ವಿದ್ಯಾರ್ಥಿ ಮಿತ್ರ ಸಹಕಾರಿಯಾಗಿದೆ ಎಂದು ಗುತ್ತಿಗೆದಾರ ಸಚಿನ ಆರೇರ ಹೇಳಿದರು.

ಪಟ್ಟಣದ ಜ್ಞಾನ ಭಾರತಿ ಶಾಲೆಯ ವಿದ್ಯಾರ್ಥಿಗಳಿಗೆ ಶುಕ್ರವಾರ ವಿಜಯವಾಣಿ ವಿದ್ಯಾರ್ಥಿ ಮಿತ್ರ ವಿತರಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಮಿತ್ರ ಪತ್ರಿಕೆ ಪರೀಕ್ಷೆಗೆ ಮಾತ್ರ ಸೀಮಿತವಾಗದೆ, ಜೀವನಕ್ಕೆ ಅಗತ್ಯವಿರುವ ಮೌಲ್ಯ ಮತ್ತು ನೈತಿಕ ಶಿಕ್ಷಣ ಒಳಗೊಂಡಿದೆ. ಒಂದು ಸಮುದಾಯ ಅಭಿವೃದ್ಧಿ ಹೊಂದಿದೆ ಎಂದರೆ ಅದಕ್ಕೆ ಶಿಕ್ಷಣವೇ ಕಾರಣ. ಗ್ರಾಮೀಣ ಪ್ರದೇಶದ ಮಕ್ಕಳು ಮುಖ್ಯವಾಹಿನಿಗೆ ಬರಬೇಕು. ಶಿಕ್ಷಣ ಸಮಾಜ ಮತ್ತು ದೇಶದ ಉದ್ಧಾರಕ್ಕೆ ಅನುಕೂಲವಾಗಬೇಕು ಎಂದರು.

ಜ್ಞಾನಭಾರತಿ ಶಾಲೆ ಅಧ್ಯಕ್ಷ ಲಕ್ಷ್ಮಣ ಶೇಷಗಿರಿ ಮಾತನಾಡಿ, ಪ್ರಚಲಿತ ವಿದ್ಯಮಾನಗಳ ಜತೆಗೆ ಸಾಮಾನ್ಯ ಜ್ಞಾನದ ಅಗತ್ಯವಿದೆ. ವಿದ್ಯಾರ್ಥಿಗಳ ಭವಿಷ್ಯದ ರೂವಾರಿಗಳಾದ ಶಿಕ್ಷಕರು ಕೂಡ ಅಧ್ಯಯನ ಶೀಲರಾಗಿರಬೇಕು. ಅಂದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.

ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಆಡಳಿತ ಮಂಡಳಿಯ ಎಸ್.ಎಂ. ಹುಣಸಿಕಟ್ಟಿ, ವಿ.ಪಿ. ಗುರುಪ್ಪನವರ, ಆರ್.ಜಿ. ಗುಡಿಗೇರಿ, ಕೆ.ಎಸ್. ಕುಂಬಾರ, ಸದಾಶಿವ ಬೆಲ್ಲದ, ಕೃಷ್ಣಪ್ಪ ಆಲದಕಟ್ಟಿ, ಸುಜಾತ ಪಸಾರದ, ಮುಖ್ಯೋಪಾಧ್ಯಾಯ ವಿ.ಎಂ. ಕಬ್ಬಿಣಕಂತಿಮಠ, ಆರ್.ಬಿ. ಚನ್ನಾಪೂರಮಠ, ಜ್ಯೋತಿ ಚಕ್ರಸಾಲಿ, ವಿ.ಎಂ. ತಳವಾರ, ಎಸ್.ಎಚ್. ಬಿದರಕೊಪ್ಪ, ಜಿ.ಎಂ. ಅಂಗಡಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net