

ಗುರುಗುಂಟಾ: ಇಲ್ಲಿನ ಸೋಮನಾಥ ನಗರದ ಅಯ್ಯಪ್ಪಸ್ವಾಮಿ ಧ್ಯಾನ ಮಂದಿರ ಮತ್ತು ಅಯ್ಯಪ್ಪಸ್ವಾಮಿ ಪೀಠದಲ್ಲಿ ಇರುಮುಡಿ ಕಟ್ಟುವ ಕಾರ್ಯಕ್ರಮ ಗುರುವಾರ ಜರುಗಿತು.
ಇದನ್ನೂ ಓದಿ: ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಂದ ಶಬರಿಮಲೆ ಯಾತ್ರೆ
ನಲವತ್ತೊಂದು ದಿನ ಕಠಿಣ ವ್ರತಾಚರಣೆ ಮಾಡಿದ ಅಯ್ಯಪ್ಪ ಮಾಲಾಧಾರಿಗಳು ಇರುಮುಡಿ ಕಟ್ಟಿಕೊಂಡು ಶಬರಿಮಲೆಯತ್ತ ತೆರಳಿದರು. ಇರುಮುಡಿಯ ಒಂದು ಕಡೆ ತುಪ್ಪ ತುಂಬಿರುವ ತೆಂಗಿನಕಾಯಿ, ಮತ್ತೊಂದು ಕಡೆ ಅಯ್ಯಪ್ಪ ಸ್ವಾಮಿ, ಇತರ ಪೂಜಾದ್ರವ್ಯಗಳನ್ನು ಇಟ್ಟು ಹಗ್ಗದಿಂದ ಕಟ್ಟಿ ಭದ್ರಪಡಿಸಿರುತ್ತಾರೆ.
ತೆಂಗಿನಕಾಯಿ ನೀರು ತೆಗೆದು ಅದರಲ್ಲಿ ತುಪ್ಪ ಹೇಗೆ ತುಂಬುತ್ತೇವೆಯೋ ಅದೇ ರೀತಿ ಮನಸ್ಸಿನೊಳಗಿನ ಲೌಕಿಕ ಸಂಬಂಧ ಹೊರಹಾಕಿ ಆಧ್ಯಾತ್ಮಿಕ ಚಿಂತನೆ ತುಂಬಿ ಭದ್ರಪಡಿಸುವುದು ಇರುಮುಡಿಯ ತಾತ್ಪರ್ಯ ಎನ್ನುತ್ತಾರೆ ಗುರುಸ್ವಾಮಿಗಳು. ಭಕ್ತರು ಕಾಣಿಕೆ ಜತೆಗೆ ಅಕ್ಕಿ ಸಮರ್ಪಿಸಿದರು.
ಪ್ರಮುಖರಾದ ರಾಜಾ ಶ್ರೀನಿವಾಸನಾಯಕ ಕೋಠಾ, ವೆಂಕಟೇಶ ಗುತ್ತೇದಾರ್, ಕೃಷ್ಣಾ ಶ್ರೇಷ್ಠಿ ಕಿನ್ನಾಳ್, ಶ್ರೀನಿವಾಸ ಕಿನ್ನಾಳ್, ಪವನ ಇಲ್ಲೂರ ಕಾರಟಗಿ, ಸುರೇಶ್ ರಾಮತ್ನಾಳ್, ರೇವಣಸಿದ್ದಯ್ಯಸ್ವಾಮಿ, ಮಲ್ಲೇಶ ನಾಗಲಿಕರ್, ಅಮರೇಶ ಜಾನೇಕಲ್, ವಾದಿರಾಜ ಗುಪ್ತ, ರಂಗಯ್ಯ ಇಲ್ಲೂರ್, ಅಮರೇಶ ಹಡಪದ ಇತರರಿದ್ದರು.