ಚದುರಂಗ ಸ್ಪರ್ಧೆ ವಿಜೇತರಿಗೆ ಟ್ರೋಫಿ ವಿತರಣೆ

SVL-Chess27(2)
Published on

ಸಾಸ್ವೆಹಳ್ಳಿ: ದಸರಾ ಹಬ್ಬದ ಅಂಗವಾಗಿ ಸಮೀಪದ ಲಿಂಗಾಪುರ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗ್ರಾಮಸ್ಥರು ಚದುರಂಗ ಸ್ಪರ್ಧೆ ಏರ್ಪಡಿಸಿದ್ದರು.

ಕಳೆದ ಹನ್ನೆರಡು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಚದುರಂಗ ಸ್ಪರ್ಧೆಯಲ್ಲಿ ಇಪ್ಪತ್ತು ತಂಡಗಳು ಪಾಲ್ಗೊಂಡಿದ್ದವು. ಕೋವಿಡ್ ನಿಯಮಾನುಸಾರ ಸ್ಪರ್ಧೆ ನಡೆಸಲಾಯಿತು. ಗ್ರಾಮದ ಮುಖಂಡರಾದ ನಂಜಪ್ಪಗೌಡ, ರಾಮಚಂದ್ರಪ್ಪ, ಟೈಲರ್ ಕುಮಾರ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಪಂಚಾಯಿತಿ ಅಧ್ಯಕ್ಷೆ ಚಂದ್ರಮ್ಮ ಹಾಲೇಶಪ್ಪ, ಸ್ಪರ್ಧಾ ವಿಜೇತರಿಗೆ ಟ್ರೋಫಿ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net