ಕೂಲಂಬಿ ಕೆರೆಗೆ ತಡೆಗೋಡೆ ನಿರ್ಮಿಸಿ

SVL-Kere 01(2)
Published on

ಸಾಸ್ವೆಹಳ್ಳಿ: ತಾಲೂಕಿನ ಕೂಲಂಬಿ ಗ್ರಾಮದ ಕೆರೆಗೆ ಜಿಲ್ಲಾ ಮುಖ್ಯರಸ್ತೆ ಹೊಂದಿಕೊಂಡಿದ್ದು, ಕೆರೆಗೆ ತಡೆಗೋಡೆ ನಿರ್ಮಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಈ ಮಾರ್ಗವಾಗಿ ನಿತ್ಯ ನೂರಾರು ವಾಹನಗಳು ಓಡಾಡುತ್ತವೆ. ಕಡಿದಾದ ತಿರುವು ಸಹ ಇದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ರಸ್ತೆಯ ಒಂದು ಬದಿಗೆ ತಡೆಗೋಡೆ ನಿರ್ಮಿಸಬೇಕಿದೆ.

ಕೆರೆಗೆ ಸಧ್ಯ ರೈತರ ಕೊಟ್ಟಿಗೆ ಗೊಬ್ಬರದ ತಿಪ್ಪೆಗಳು ಹಾಗೂ ಅರಣ್ಯ ಇಲಾಖೆ ಬೆಳೆಸಿರುವ ಸಸಿಗಳು, ವಿದ್ಯುತ್ ಕಂಬಗಳೇ ತಡೆಗೋಡೆಯಂತಿವೆ. ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮುನ್ನ ಎಚ್ಚೆತ್ತು ತಡೆಗೋಡೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net