ನಿದ್ದೆಯಲ್ಲಿ ಅಧಿಕಾರಿಗಳು: ಕಸದಲ್ಲಿ ಮಿಂದೆದ್ದ ವೃಷಭಾವತಿಯ ಕಣ್ಣೀರು

vrushabhavathi
Published on

ಬೆಂಗಳೂರು : ರಾಜಧಾನಿ ಬೆಂಗಳೂರಿನ ನದಿಯಲ್ಲಿ ಒಂದಾದ ವೃಷಭಾವತಿ ನದಿಯನ್ನು ಕಲುಷಿತ ಶಾಪದಿಂದ ಮುಕ್ತಗೊಳಿಸುವ ಪ್ರಯತ್ನಗಳೇ ಆಗುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಸ್ಥಳೀಯ ಸಂಸ್ಥೆಗಳು, ಪೊಲೀಸ್ ಇಲಾಖೆ ಕಣ್ಮಚ್ಚಿಕುಳಿತ್ತಿರುವುದು ಮೂಲ ಕಾರಣವಾಗಿದೆ.

ಮೈಸೂರು ರಸ್ತೆ ಕುಂಬಳಗೂಡು ಮಾರ್ಗವಾಗಿ ಕನಕಪುರ ಹೆದ್ದಾರಿಗೆ ತಲುವ ಮಾರ್ಗದಲ್ಲಿ ವೃಷಭಾವತಿ ನದಿ (ವೈಎಂಸಿಎ ಬಳಿ) ಸಿಗಲಿದ್ದು, ಸೇತುವೆ ದಾಟಿ ಮುಂದೆ ಸಾಗಬೇಕಿದೆ. ಈ ಸೇತುವೆ ಆಸುಪಾಸು ಕಸದ ರಾಶಿ ಆವರಿಸಿದೆ. ಕುಂಬಳಗೂಡು ಮತ್ತು ತಗಚಗುಪ್ಪೆಯಲ್ಲಿ ಇರುವ ಹೋಟೆಲ್ ನೌಕರರು, ಮಾಂಸದಂಗಡಿ ಮಾಲೀಕರು, ವಾಣಿಜ್ಯ ಮಳಿಗೆಗಳ ಕಸ, ಆಸ್ಪತ್ರೆ ತ್ಯಾಜ್ಯ ಮತ್ತು ಕುಂಬಳಗೂಡು ಕೈಗಾರಿಕೆ ಪ್ರದೇಶಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ರಾತ್ರಿ ಹೊತ್ತಿನಲ್ಲಿ ವಾಹನಗಳಲ್ಲಿ ತಂದು ಸೇತುವೆ ಮೇಲಿಂದ ವೃಷಭಾವತಿ ನದಿಗೆ ಸುರಿದು ಹೋಗುತ್ತಾರೆ. ಕೆಲವರು ಸೇತುವೆ ಅಕ್ಕಪಕ್ಕ ತ್ಯಾಜ್ಯ ತುಂಬಿದ ಚೀಲಗಳನ್ನು ಎಸೆಯುತ್ತಾರೆ.

ಕ್ರಮ ತೆಗೆದುಕೊಳ್ಳಬೇಕಾಗಿರುವ ಕುಂಬಳಗೂಡು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿದಿಗಳು ಈ ಕಡೆ ಮುಖ ಮಾಡುತ್ತಿಲ್ಲ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಚಕ್ಷಣ ಪಡೆ ಸುಳಿವೇ ಇಲ್ಲ. ಕುಂಬಳಗೂಡು ಪೊಲೀಸರು ನೋಡಿದರೂ ನೋಡದಂತೆ ವರ್ತಿಸುತ್ತಿರುವುದು ವಿಪರ್ಯಾಸವಾಗಿದ್ದು, ಕಳಂಕದಿಂದ ಮುಕ್ತವಾಗಲು ಇನ್ನೂ ಎಷ್ಟು ವರ್ಷಬೇಕೆಂದು ವೃಷಭಾವತಿ ನದಿ ಕಣ್ಣೀರು ಹಾಕುತ್ತಿದ್ದಾಳೆ.

bangalore

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net