

ಬೆಂಗಳೂರು: ಇದಾಗಲೇ ಅನ್‌ಲಾಕ್ 2.0 ಸಂದರ್ಭದಲ್ಲಿ ಕೆಲವು ವಿನಾಯಿತಿಗಳನ್ನು ನೀಡಿರುವ ಬೆನ್ನಲ್ಲೇ ಇದೀಗ ಅನ್‌ಲಾಕ್ 3.0ಗೆ ಕ್ಷಣಗಣನೆ ಶುರುವಾಗಿದೆ.
ನಾಳೆ ಅಂದರೆ ಜುಲೈ 3ರಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆಯಲಿದೆ ಹೈ ವೋಲ್ಟೇಜ್ ಮೀಟಿಂಗ್ ನಡೆಯಲಿದ್ದು, ಈ ಸಭೆಯಲ್ಲಿ ಯಾವೆಲ್ಲಾ ಸೌಕರ್ಯಗಳು ಇರಬೇಕು, ಯಾವುದಕ್ಕೆ ನಿರ್ಬಂಧ ಮುಂದುವರೆಸಬೇಕು ಎಂಬ ಬಗ್ಗೆ ನಿರ್ಧಾರ ಆಗಲಿದೆ.
ಮುಖ್ಯಮಂತ್ರಿಗಳು ಹಿರಿಯ ಸಚಿವರ ಜತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದು, ಈ ಸಭೆಯ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಯಾವುದಕ್ಕೆಲ್ಲಾ ವಿನಾಯಿತಿ ಸಿಗಬಹುದು?
- ವ್ಯಾಪಾರದ ಅವಧಿ ಇನ್ನಷ್ಟು ವಿಸ್ತರಣೆ ಸಾಧ್ಯತೆ
- ಮಾಲ್ ಗಳಲ್ಲಿ ಶೇಕಡಾ 50ರಷ್ಟು ಆಧಾರದಲ್ಲಿ ಅನುಮತಿ ಸಾಧ್ಯತೆ
- ಒಳಾಂಗಣ ಶೂಟಿಂಗ್ ಗೆ ಅನುಮತಿ ಸಾಧ್ಯತೆ
- ಬಾರ್, ರೆಸ್ಟೋರೆಂಟ್‌ಗಳಿಗೆ ಅನುಮತಿ ( ಶೇಕಡಾ 50 ರಷ್ಟು ಗ್ರಾಹಕರಿಗೆ ಅವಕಾಶ)
- ಪ್ರವಾಸಿ ತಾಣಗಳಿಗೆ ಅನುಮತಿ ಸಾಧ್ಯತೆ( ಕೋವಿಡ್ ನಿಯಮ ಪಾಲನೆ ಆಧಾರದ ಮೇಲೆ)
- ಉದ್ಯಾನವನ ಪೂರ್ಣ ಪ್ರಮಾಣದಲ್ಲಿ ಓಪನ್ ಸಾಧ್ಯತೆ( ಜಿಮ್ ಸಲಕರಣೆ ಉಪಯೋಗಿಸೋದಕ್ಕೆ ನಿಷೇಧ)
- ಸರ್ಕಾರಿ ಕಚೇರಿಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಗೆ ಅವಕಾಶ
- ಕ್ಯಾಬ್, ಆಟೋಗಳಿಗೆ ವಿಧಿಸಿರೋ ನಿರ್ಬಂಧ ತೆಗೆಯುವ ಸಾಧ್ಯತೆ( ಕೇವಲ ಇಬ್ಬರು ಪ್ರಯಾಣಿಕರಿಗೆ ಮಾತ್ರ ಅವಕಾಶ ಇತ್ತು)
- ದೇವಸ್ಥಾನಗಳಲ್ಲಿ ಕನಿಷ್ಠ ಭಕ್ತಾಧಿಗಳಿಗೆ ಅವಕಾಶ ಸಾಧ್ಯತೆ
- ಹೊಟೇಲ್‌ಗಳಲ್ಲಿ ಈಗಿನ ನಿಯಮ ಮುಂದುವರಿಕೆ (ಶೇಕಡಾ 50ರಷ್ಟು ಗ್ರಾಹಕರಿಗೆ ಅವಕಾಶ)
ಮದುವೆ ಅಂತ್ಯ ಸಂಸ್ಕಾರಕ್ಕೆ ಈಗಿನ ನಿಯಮವೇ ಮುಂದುವರಿಕೆ
- ವೀಕೆಂಡ್ ಕರ್ಫ್ಯೂವಿನಲ್ಲಿ ಇನ್ನಷ್ಟು ಸಡಿಲಿಕೆ
- ಕಾಲೇಜುಗಳ ಆರಂಭಕ್ಕೆ ಅನುಮತಿ (ಲಸಿಕೆ ಪಡೆದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ)
ಯಾವುದಕ್ಕಿಲ್ಲ ವಿನಾಯಿತಿ?
- ಚಿತ್ರ ಮಂದಿರ ಓಪನ್ ಆಗೋದು ಅನುಮಾನ
- ಶಾಪಿಂಗ್ ಮಾಲ್ ಒಳಗಡೆ ಇರೋ ಫುಡ್ ಕೋರ್ಟ್
- ಶಾಲೆಗಳು ಒಪನ್ ಆಗೋದು ಅನುಮಾನ
ಅನ್ ಲಾಕ್ ನಲ್ಲಿ ಸರ್ಕಾರ ಏನು ಮಾಡುತ್ತೆ..?
- ಹೊರ ರಾಜ್ಯದಿಂದ ಬರುವವರ ಮೇಲೆ ನಿಗಾ
- ಡೆಲ್ಟಾ + ವೈರಸ್ ಹೆಚ್ಚಿರೋ ರಾಜ್ಯಗಳ ಗಡಿಯಲ್ಲಿ ಚೆಕಿಂಗ್
- ಕೋವಿಡ್ ನೆಗೆಟಿವ್ ರಿಪೋರ್ಟ್ ಇದ್ದರೆ ಮಾತ್ರ ಹೊರ ರಾಜ್ಯದಿಂದ ಎಂಟ್ರಿ
- ನೈಟ್ ಕರ್ಫ್ಯೂ ಮುಂದುವರೆಸುವ ಸಾಧ್ಯತೆ
- ಕೋವಿಡ್ ನಿಯಮ ಪಾಲನೆಗೆ ಹೆಚ್ಚಿನ ಒತ್ತು