ವೈದ್ಯಕೀಯ, ಇಂಜಿನಿಯರಿಂಗ್‌ ಪದವೀಧರರಿಗೆ ಉಡುಪಿ ಆಸ್ಪತ್ರೆಗಳಲ್ಲಿ ನೇಮಕಾತಿ

job
Published on

ರಾಷ್ಟ್ರೀಯ ಆರೋಗ್ಯ ಅಭಿಯಾನ 2021-22ನೇ ಸಾಲಿನಡಿ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಿಂದ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಉಡುಪಿಯ ಜಿಲ್ಲಾ ಆಸ್ಪತ್ರೆ, ಕುಂದಾಪುರ, ಕಾರ್ಕಳದ ತಾಲೂಕು ಆಸ್ಪತ್ರೆ, ಉಡುಪಿಯ ಪಂಚಕರ್ಮ ಟಕ, ನಗರ ಆರೋಗ್ಯ ಕೇಂದ್ರ, ಗ್ರಾಮೀಣ ಪ್ರದೇಶದ ಆರೋಗ್ಯ ಸಂಸ್ಥೆಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುವುದು. ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗುವಾಗ ಕಡ್ಡಾಯವಾಗಿ ಜಾತಿ ಪ್ರಮಾಣಪತ್ರವನ್ನು ಅರ್ಜಿಯೊಂದಿಗೆ ಸಲ್ಲಿಸಲು ಸೂಚಿಸಲಾಗಿದೆ. ವೈದ್ಯಾಧಿಕಾರಿಗೆ 50 ವರ್ಷದೊಳಗಿನ ಅಭ್ಯರ್ಥಿಗಳಿಗೆ ಮೊದಲ ಆದ್ಯತೆ ಎಂದು ತಿಳಿಸಲಾಗಿದೆ.

ಒಟ್ಟು ಹುದ್ದೆಗಳು: 20

ಹುದ್ದೆ ವಿವರ

* ವೈದ್ಯಾಧಿಕಾರಿ - 9

* ಸಿವಿಲ್​ ಇಂಜಿನಿಯರ್​ - ಐ- 1

* ಬಯೋಮೆಡಿಕಲ್​ ಇಂಜಿನಿಯರ್​- ಐಐ - 1

* ಪಂಚಕರ್ಮತಜ್ಞ ವೈದ್ಯರು - 1

* ಇನ್​ಸ್ಟ್ರಕ್ಟರ್​- ಯಂಗ್​ ಹಿಯರಿಂಗ್​ ಇಂಪೈರ್​ಡ್​ ಚಿಲ್​ಡ್ರನ್​ - 1

* ಡೆಂಟಲ್​ ಹೈಜಿನಿಸ್ಟ್​ - 1

* ಎಲ್​ಎಚ್​ವಿ - 1

* ಎಎನ್​ಎಂ - 4

* ಕಿರಿಯ ಪುರುಷ ಆರೋಗ್ಯ ಸಹಾಯಕ - 1

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ಪಿಯುಸಿ (ವಿಜ್ಞಾನ), ಆರೋಗ್ಯ ಕಾರ್ಯಕರ್ತರ ತರಬೇತಿ, ಆರೋಗ್ಯ ನಿರೀಕ್ಷಕರ ಡಿಪ್ಲೊಮಾ, ಡೆಂಟಲ್​ ಹೈಜಿನಿಸ್ಟ್​, ಹಿಯರಿಂಗ್​ ಲಾಂಗ್ವೇಜ್​ ಆ್ಯಂಡ್​ ಸ್ಪೀಚ್​ ಡಿಪ್ಲೊಮಾ, ಎಎನ್​ಎಂ, ಸಿವಿಲ್​/ ಎಲೆಕ್ಟ್ರಿಕಲ್​/ ಮೆಕಾನಿಕಲ್​, ಬಯೋ ಮೆಡಿಕಲ್​/ ಮೆಡಿಕಲ್​ ಎಲೆಕ್ಟ್ರಾನಿಕ್ಸ್​ನಲ್ಲಿ ಬಿಇ/ಬಿಟೆಕ್​/ ಎಂಎಸ್ಸಿ (ಮೆಡಿಕಲ್​ ಇನ್​ಸ್ಟ್ರುಮೆಂಟ್​), ಪಂಚಕರ್ಮದಲ್ಲಿ ಎಂಡಿ, ಎಂಬಿಬಿಎಸ್​ ಮಾಡಿರುವ ಅಭ್ಯರ್ಥಿಗಳು ಹುದ್ದೆಗೆ ಅನುಗುಣವಾಗಿ ಅರ್ಜಿಸಲ್ಲಿಸಬಹುದು.

ವೇತನ: ವೈದ್ಯಾಧಿಕಾರಿಗೆ ಮಾಸಿಕ 50,000 ರೂ., ಇಂಜಿನಿಯರ್​ಗೆ ಮಾಸಿಕ 25,000 ರೂ., ಪಂಚಕರ್ಮ ವೈದ್ಯರಿಗೆ ಮಾಸಿಕ 20,790 ರೂ., ಇನ್​ಸ್ಟ್ರಕ್ಟರ್​, ಡೆಂಟಲ್​ ಹೈಜಿನಿಸ್ಟ್​ಗೆ ಮಾಸಿಕ 15,000 ರೂ., ಎಲ್​ಎಚ್​ವಿಗೆ ಮಾಸಿಕ 12,600 ರೂ., ಎಎನ್​ಎಂ, ಆರೋಗ್ಯ ಸಹಾಯಕರಿಗೆ 11,500 ರೂ. ವೇತನ ನೀಡಲಾಗುವುದು. 15,000 ರೂ.ಗಿಂತ ಕಡಿಮೆ ವೇತನ ಇರುವ ಹುದ್ದೆಗಳಿಗೆ ಪಿಎಫ್​ ಸೌಲಭ್ಯ ಇರುವುದಿಲ್ಲ ಎಂದು ತಿಳಿಸಲಾಗಿದೆ.

ಸಂದರ್ಶನ ನಡೆಯುವ ದಿನಾಂಕ: 30.8.2021 (ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆ ವರೆಗೆ)

ಸಂದರ್ಶನ ನಡೆಯುವ ಸ್ಥಳ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ, ಅಜ್ಜರಕಾಡು, ಉಡುಪಿ-576101

ಅಧಿಸೂಚನೆಗೆ: https://bit.ly/3jh3XjH

ಮಾಹಿತಿಗೆ: https://udupi.nic.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net