

ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿವಿಧ ವಿಭಾಗ/ ಘಟಕಗಳಲ್ಲಿ ಹಲವು ಹುದ್ದೆಗಳಿಗೆ ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ನೇರ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ.
* ಟೆಕ್ನಿಕಲ್ ಅಸಿಸ್ಟೆಂಟ್
ಧಾರವಾಡದ ಕೃಷಿ ವಿಶ್ವವಿದ್ಯಾಲಯ ಅಧೀನದಲ್ಲಿ ಕಾರ್ಯನಿರ್ವಹಿಸುವ ಜಮಖಂಡಿಯಲ್ಲಿರುವ ಡಿಪ್ಲೊಮಾ (ಕೃಷಿ) ಮಹಾವಿದ್ಯಾಲಯದಲ್ಲಿ ಟೆಕ್ನಿಕಲ್ ಅಸಿಸ್ಟೆಂಟ್ 1 ಹುದ್ದೆಗೆ ತಾತ್ಕಾಲಿಕ ನೇಮಕಾತಿ ಮೂಲಕ ನೇಮಕ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಿಂದ ಅರ್ಜಿಆಹ್ವಾನಿಸಲಾಗಿದೆ. ಕೃಷಿಯಲ್ಲಿ ಪದವಿ ಪಡೆದಿರುವ, ಗರಿಷ್ಠ 35 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿಸಲ್ಲಿಸಬಹುದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ. ಮಾಸಿಕ 21,600 ರೂ. ವೇತನ ಇದೆ. ವೆಬ್ಸೈಟ್ನಲ್ಲಿ ನೀಡಲಾಗಿರುವ ಅರ್ಜಿನಮೂನೆಯನ್ನು ಭರ್ತಿ ಮಾಡಿ ಎರಡು ಪ್ರತಿ ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲ ಮೂಲ ದಾಖಲೆಯೊಂದಿಗೆ ಡೀನ್ (ಸ್ನಾತಕೋತ್ತರ) ಅವರ ಕಚೇರಿ, ಕೃಷಿ ವಿಶ್ವವಿದ್ಯಾಲಯ, ಧಾರವಾಡದಲ್ಲಿ ಬೆಳಗ್ಗೆ 10 ಗಂಟೆಗೆ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ನಡೆಯುವ ದಿನಾಂಕ: 28.9.2021
ಅಧಿಸೂಚನೆಗೆ: https://bit.ly/39pb2J9
* ಗ್ರಾಜುಯೇಟ್ ಅಸಿಸ್ಟೆಂಟ್
ಧಾರವಾಡ ಕೃಷಿ ವಿವಿಯ ಸಂಶೋಧನಾ ಟಕದಲ್ಲಿ ಆರಂಭಿಸಲಾಗುತ್ತಿರುವ "Development and Standarsization of Management Strategies in Field and Vegetable crop diseases by Application of Zineb 75% WP unde Climate Resilience in Northern Karnatak"ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸಲು ಗ್ರಾಜುಯೇಟ್ ಅಸಿಸ್ಟೆಂಟ್ 1 ಹುದ್ದೆಗೆ ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಪ್ಲಾಂಟ್ ಪ್ಯಾಥೋಲಜಿಯಲ್ಲಿ ಎಂಎಸ್ಸಿ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಹರಾಗಿದ್ದು, ಈ ಹುದ್ದೆಯನ್ನು ಕಾಯಂ ಹುದ್ದೆಗೆ ಪರಿಗಣಿಸುವುದಿಲ್ಲ ಎಂದು ತಿಳಿಸಲಾಗಿದೆ. ಮಾಸಿಕ 14,000ರೂ. ಗೌರವ ಧನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅಸೋಸಿಯೇಟ್ ಡೈರೆಕ್ಟರ್ ಆ್ ರಿಸರ್ಚ್, ಯುಎಎಸ್, ಧಾರವಾಡದಲ್ಲಿ ಬೆಳಗ್ಗೆ 11ಗಂಟೆಗೆ ಅಗತ್ಯ ದಾಖಲೆಗಳ ಮೂಲ ಪ್ರತಿಯೊಂದಿಗೆ ಸಂದರ್ಶನಕ್ಕೆ ಹಾಜರಾಗಬಹುದು.
ಸಂದರ್ಶನ ನಡೆಯುವ ದಿನಾಂಕ: 25.9.2021
ಅಧಿಸೂಚನೆಗೆ: https://bit.ly/39phxMn
* ಯಂಗ್ ಪ್ರೊಫೆಷನಲ್
ಧಾರವಾಡ ವಿಶ್ವವಿದ್ಯಾಲಯದ ಸಂಶೋಧನಾ ವಲಯದಲ್ಲಿ ಕೈಗೊಳ್ಳಲಾಗುತ್ತಿರುವ Network Programme an Organic Farming at Institute of Organic Farming ಎಂಬ ಯೋಜನೆಯಲ್ಲಿ ಕಾರ್ಯನಿರ್ವಹಿಸಲು 1 ಸ್ಥಾನಕ್ಕೆ ಯಂಗ್ ಪ್ರೊಫೆಷನಲ್ ಅನ್ನು ತಾತ್ಕಾಲಿಕ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ಕೃಷಿಯಲ್ಲಿ ಬಿಎಸ್ಸಿ ಪದವಿ ಪಡೆದಿರುವ ಆರ್ಗಾನಿಕ್ ಕಲ್ಟಿವೇಷನ್ನಲ್ಲಿ ಅನುಭವ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಾಸಿಕ 25,000 ರೂ. ವೇತನ ಇದೆ.
ಸಂದರ್ಶನ ನಡೆಯುವ ದಿನಾಂಕ: 25.9.2021
ಅಧಿಸೂಚನೆಗೆ: https://bit.ly/3u1hiQP
ಮಾಹಿತಿಗೆ: http://www.uasd.edu
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಿಗೆ ಬೇಡಿಕೆ
ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು ಹಾಗೂ ಕಾನೂನು ಅಧ್ಯಯನ ವಿಭಾಗದಲ್ಲಿ 2021-22ರ ಶೈಕ್ಷಣಿಕ ವರ್ಷಕ್ಕೆ ಕಾನೂನು, ಕನ್ನಡ, ಇಂಗ್ಲಿಷ್, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ ಹಾಗೂ ಅರ್ಥಶಾಸ್ತ್ರ ವಿಷಯಗಳನ್ನು ಬೋಧನೆ ಮಾಡಲು ಪೂರ್ಣಾವಧಿ/ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಸಂಬಂಧಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಅಭ್ಯರ್ಥಿಗಳು ಅರ್ಜಿಸಲ್ಲಿಸಲು ಅರ್ಹರಾಗಿದ್ದು, ಅಜಿರ್ಯ ಪ್ರತಿಯನ್ನು ಅಗತ್ಯ ದಾಖಲೆಯೊಂದಿಗೆ Principal, University Law College, Bangalore University, Jnana Bharathi, Campus Bengaluru-560056 ವಿಳಾಸಕ್ಕೆ ಕಳುಹಿಸಲು ಸೂಚಿಸಲಾಗಿದೆ.
ಅರ್ಜಿಸಲ್ಲಿಸಲು ಕೊನೇ ದಿನ: 27.9.2021
ಅಧಿಸೂಚನೆಗೆ: https://bit.ly/39oOd8A
ಮಾಹಿತಿಗೆ: https://bangaloreuniversity.ac.in/