ಲವ್‌ ಮಾಡಿದ್ದು 13 ವರ್ಷ: ಗರ್ಭಪಾತ ಮಾಡಿಸಿ ಮದ್ವೆ ದಿನ ಎಸ್ಕೇಪ್‌- ಉಡುಪಿ ಯುವತಿಯ ಪ್ರತಿಭಟನೆ

marraige
Published on

ಉಡುಪಿ: ಇವರಿಬ್ಬರು ಲವ್‌ ಮಾಡಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 13 ವರ್ಷ. ಇದೀಗ ಮದುವೆಯ ಕನಸು ಕಾಣುತ್ತಿದ್ದ ಯುವತಿಗೆ ಬರಸಿಡಿಲು ಬಡಿದುಬಿಟ್ಟಿದೆ, ಕಾರಣ, ಮದುವೆಯ ದಿನವೇ ಯುವಕ ಪರಾರಿಯಾಗಿದ್ದು, ಆತನಿಗಾಗಿ ಹುಡುಕಾಟ ನಡೆದಿದೆ!

ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಉಡುಪಿಯಲ್ಲಿ. ಮಣಿಪಾಲದ ಯುವತಿ ಮತ್ತು ಪರ್ಕಳದ ಗಣೇಶ್ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ ಮದುವೆಯ ದಿನವೇ ಗಣೇಶ್‌ ಎಸ್ಕೇಪ್‌ ಆಗಿರುವ ಕಾರಣ, ಮದುವೆ ನಿಂತುಹೋಗಿದ್ದು, ಯುವತಿ ಆತನ ಮನೆಯ ಮುಂದೆ ಕೂತು ಪ್ರತಿಭಟನೆ ಮಾಡುವಂತಾಗಿದೆ.

13 ವರ್ಷ ಪರಸ್ಪರ ಪ್ರೀತಿಸಿದ್ದೂ ಅಲ್ಲದೇ, ಗಣೇಶ್‌ ಯುವತಿಯ ಜತೆ ದೈಹಿಕ ಸಂರ್ಪಕವನ್ನೂ ಇಟ್ಟುಕೊಂಡಿದ್ದೆ. ಇಷ್ಟು ವರ್ಷಗಳ ಪ್ರೀತಿಯೆಂದುಕೊಂಡ ಯುವತಿ ಆತ ತನ್ನನ್ನು ಮದುವೆಯಾಗಬಹುದು ಎಂದುಕೊಂಡು ದೈಹಿಕ ಸಂಪರ್ಕಕ್ಕೂ ಓಕೆ ಎಂದುಬಿಟ್ಟಿದ್ದಾಳೆ!

ಕಾಮತೃಷೆಯನ್ನು ತೀರಿಸಿಕೊಳ್ಳುತ್ತಿದ್ದ ಗಣೇಶ್‌ನಿಂದಾಗಿ ಯುವತಿ ಎರಡು ಬಾರಿ ಗರ್ಭವನ್ನೂ ಧರಿಸಿದ್ದಾಳೆ. ಕುತಂತ್ರಿ ಗಣೇಶ್‌ ಇನ್ನೂ ಮದುವೆಯಾಗಿಲ್ಲ, ಆದ್ದರಿಂದ ಗರ್ಭ ಬೇಡ ಎಂದು ಹೇಳಿ ಎರಡೂ ಬಾರಿ ಅಬಾರ್ಷನ್‌ ಮಾಡಿಸಿದ್ದಾನೆ. ನಂತರ ಯುವತಿಯ ಒತ್ತಾಯದ ಮೇರೆಗೆ ಮದುವೆಗೆ ಒಪ್ಪಿಕೊಂಡಂತೆ ನಟಿಸಿದ್ದಾನೆ.

ಇತ್ತ ಯುವತಿಯ ಮನೆಯವರೂ ಮದುವೆಗೆ ಒಪ್ಪಿದ್ದಾರೆ. ನವೆಂಬರ್‌ 6ಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಆದರೆ ಕಪಟ ಬುದ್ಧಿ ತೋರಿದ ಗಣೇಶ್‌ ಬೇರೊಬ್ಬ ಹುಡುಗಿಯ ಜತೆ ನವೆಂಬರ್ 4ಕ್ಕೆ ಬೇರೆ ಮದುವೆ ಫಿಕ್ಸ್‌ ಮಾಡಿಕೊಂಡಿದ್ದಾನೆ.

ಈ ವಿಚಾರ ಯುವತಿಗೆ ತಿಳಿದು ಮದುವೆ ನಿಲ್ಲಿಸಿದ್ದಾಳೆ. ನವೆಂಬರ್ 6ಕ್ಕೆ ಈಕೆಯನ್ನೇ ಮದುವೆಯಾಗುವುದಾಗಿ ಗಣೇಶ್ ಒಪ್ಪಿಕೊಂಡಿದ್ದಾನೆ. ಮದುವೆಯ ಎಲ್ಲ ಶಾಸ್ತ್ರಗಳನ್ನು ಯುವತಿ ಮನೆಯವರು ಮುಗಿಸಿದ್ದರು.

ಯುವತಿ ಸಂಪೂರ್ಣ ರೆಡಿಯಾಗಿ ಮಂಟಪಕ್ಕೆ ಬಂದಿದ್ದಾಳೆ. ಆದರೆ ಯುವಕ ಮಾತ್ರ ಬರಲೇ ಇಲ್ಲ. ಆತಂಕದಿಂದ ಯುವತಿ ಮನೆಯವರು ಆತನ ಮನೆಗೆ ಹೋಗಿ ನೋಡಿದಾಗ ಅಲ್ಲಿ ಅವನು ಇರಲಿಲ್ಲ, ಫೋನ್‌ ಕೂಡ ಸ್ವಿಚ್‌ ಆಫ್‌. ಎಲ್ಲಿಯೂ ಸಿಗದಾಗ ಯುವತಿ ಆತನ ಮನೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net