ಬೆಚ್ಚಿಬಿದ್ದ ತುಮಕೂರು: ಗ್ರಾಮ ಪಂಚಾಯಿತಿ ಉಪಾಧ್ಯಕ್ಷನ ಬರ್ಬರ ಹತ್ಯೆ- ಗಾಡಿ ಹತ್ತಿಸಿ ಕೊಲೆ

tumkur
Published on

ತುಮಕೂರು: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮ ಪಂಚಾಯತಿ ಉಪಾಧ್ಯಕ್ಷನ ಬರ್ಬರ ಕೊಲೆ ಮಾಡಲಾಗಿದೆ.

ಅಶೋಕ್‌ ಎಂಬ 46 ವರ್ಷದವರು ಕೊಲೆಯಾದವರು. ಭೀಮಾ ನಾಯ್ಕನ ತಾಂಡಾದಲ್ಲಿ ಈ ಘಟನೆ ನಡೆದಿದೆ. ನಾಗರಾಜ ನಾಯ್ಕ್ ಎನ್ನುವವನಿಂದ ಹತ್ಯೆಯಾಗಿರುವುದಾಗಿ ಆರೋಪಿಸಲಾಗಿದೆ.

ನಿನ್ನೆ ಮಧ್ಯರಾತ್ರಿ 1 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ. ಟಾಟಾ ಎಸಿ ವಾಹನ ಹತ್ತಿಸಿ ಕೊಲೆ ಮಾಡಲಾಗಿದೆ. ಈ ಘಟನೆಯಲ್ಲಿ ಮೃತ ಅಶೋಕ ನಾಯ್ಕ ಅವರ ಸ್ನೇಹಿತ ಸೋಮಶೇಖರ್ ಅವರಿಗೂ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net