ಕರೋನಾದಿಂದ ಕಾಪಾಡಲು ಚಾಮುಂಡೇಶ್ವರಿ ದೇವಿಗೆ ಸಚಿವ ಸೋಮಶೇಖರ್ ಪ್ರಾರ್ಥನೆ

Somashekhar
Published on

ಮೈಸೂರು: ಜನರ ನೆಮ್ಮದಿ ಕಿತ್ತುಕೊಂಡ ಕರೋನಾ ಮಹಾಮಾರಿಯು ಜನತೆಯಿಂದ ಬಿಟ್ಟು ಹೋಗಲಿ ಎಂದು ಮಾತೆ ಚಾಮುಂಡೇಶ್ವರಿ ದೇವಿಯಲ್ಲಿ ಕೋರಿಕೊಂಡಿದ್ದಾರೆ.

ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಚಾಮುಂಡೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥಿಸಿದರು. ಬಳಿಕ ಕರೋನ ಮಹಾಮಾರಿಯಿಂದ ರಾಜ್ಯದ ಜನತೆಯನ್ನು ಹಾಗೂ ದೇಶವನ್ನು ಕಾಪಾಡು ಎಂದು ಕೋರಿಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾನು ಮೈಸೂರಿಗೆ ಹೋಗುತ್ತಿದ್ದೇನೆ ಎಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಿಳಿಸಿದಾಗ, ಅವರೂ ಸಹ ಚಾಮುಂಡೇಶ್ವರಿ ದೇವಿಯಲ್ಲಿ ಪ್ರಾರ್ಥಿಸುವಂತೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಕ್ಷಣವೇ ದೇವಸ್ಥಾನದಲ್ಲಿ ವಿಚಾರಿಸಿ ಭೇಟಿ ಕೊಟ್ಟು ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಸಚಿವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net