ಬೆಂಗಳೂರು ಸೇರಿದಂತೆ ಕೆಲವು ನಗರಗಳಲ್ಲಿ 'ಸ್ವಿಗ್ಗಿ ಜೀನಿ' ಸರ್ವಿಸ್​ ತಾತ್ಕಾಲಿಕ ಸ್ಥಗಿತ!

swiggy
Published on

ಬೆಂಗಳೂರು: ಆಹಾರ ವಿತರಿಸುವ ಸಂಸ್ಥೆಯಾದ ಸ್ವಿಗ್ಗಿಯ ಕೋರಿಯರ್​ ಸೇವೆ ಜೀನಿ ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮಹಾನಗರಗಳಲ್ಲಿ ಈ ಸೇವೆ ಸ್ಥಗಿತವಾಗಿದೆ.

ಸಮಯಕ್ಕೆ ಸರಿಯಾಗಿ ಸೇವೆ ಸಲ್ಲಿಸುವಲ್ಲಿ ಹೆಸರುವಾಸಿಯಾಗಿರುವ ಸ್ವಿಗ್ಗಿ ಜೀನಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ನೌಕರರ ಕೊರತೆ ಎನ್ನಲಾಗಿದೆ. ಈ ಕುರಿತು ಸ್ವಿಗ್ಗಿ ಜೀನಿ ತನ್ನ ಆ್ಯಪ್​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಕಾರ್ಯಾಚರಣೆಯ ಒತ್ತಡದಿಂದಾಗಿ ಸ್ವಲ್ಪ ಸಮಯದವರೆಗೆ ಈ ಸೇವೆಯನ್ನು ಒದಗಿಸಲಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಇದಾಗಲೇ ಒಂದು ವಾರದಿಂದ ಜೀನಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಆದರೆ ಏನು ಆಯಿತು ಎಂದು ಜನರಿಗೆ ತಿಳಿದಿರಲಿಲ್ಲ. ಇದೀಗ ತನ್ನ ಆ್ಯಪ್​ನಲ್ಲಿಯೇ ಮಾಹಿತಿ ಹಂಚಿಕೊಳ್ಳುವ ಮೂಲಕ ಕಂಪೆನಿ ಜನರ ಕಳವಳಕ್ಕೆ ತೆರೆ ಎಳೆದಿದೆ.

ಸ್ವಿಗ್ಗಿ ಜೀನಿ ಇದಾಗಲೇ ದೇಶಾದ್ಯಂತ 68 ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಪೈಕಿ ಬೆಂಗಳೂರು, ಮುಂಬೈ, ಹೈದರಾಬಾದ್ ಈ ಮೂರು ನಗರಗಳಲ್ಲಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net