ಶಾಲಾ-ಕಾಲೇಜು ಆರಂಭ ಯಾವಾಗ?: ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಹೇಳಿದ್ದು ಹೀಗೆ...

suresh kumar 1
Published on

ತುಮಕೂರು: ಆಗಸ್ಟ್ ತಿಂಗಳ ನಂತರ ಶಾಲೆಗಳನ್ನು ಆರಂಭಿಸುವ ಕುರಿತು ಯೋಚಿಸಲಾಗುವುದು ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಮೊದಲಿಗೆ ಪ್ರೌಢಶಾಲೆ ಮತ್ತು ಪಿಯು ಕಾಲೇಜುಗಳನ್ನು ಆರಂಭಿಸಲಾಗುವುದು. ಆ ನಂತರ ಪ್ರಾಥಮಿಕ ಶಾಲೆ ಆರಂಭದ ಕುರಿತು ಚಿಂತನೆ ನಡೆಸುವ ಯೋಜನೆ ಇದೆ ಎಂದರು.

ಜಿಲ್ಲೆಯಲ್ಲಿ 8 ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಗುರುವಾರ ಭೇಟಿ ನೀಡಿ, ವಿದ್ಯಾರ್ಥಿಗಳಲ್ಲಿ ಸುರಕ್ಷಿತ ಪರೀಕ್ಷೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ವಿದ್ಯಾರ್ಥಿಗಳಲ್ಲಿ ನವಚೈತನ್ಯ ಮೂಡಿದೆ. ಅಲ್ಲದೆ ಎಲ್ಲಾ ಇಲಾಖೆಯ ಸಮನ್ವಯತೆಯೊಂದಿಗೆ ಪರೀಕ್ಷೆ ಸರ್ಕಾರದ ಪೂರ್ವ ನಿರ್ಧಾರದಂತೆ ನಡೆಯುತ್ತಿದೆ ಎಂದು ತಿಳಿಸಿದರು.

32 ವಿದ್ಯಾರ್ಥಿಗಳು ವಂಚಿತ!

ರಾಜ್ಯದಲ್ಲಿ ಕರೊನಾ ಸೋಂಕಿನಿಂದ 32 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ಪರೀಕ್ಷಾ ಕೇಂದ್ರಗಳಿಂದ ಈ ವಿದ್ಯಾರ್ಥಿಗಳಿಗೆ ಸೋಂಕು ತಗುಲಿಲ್ಲ. ರೋಗದ ಮೂಲ ಬೇರೆ ಆಗಿದೆ. ನಮ್ಮ ಸಂಕಲ್ಪದಂತೆ ಯಾವುದೇ ಪರೀಕ್ಷಾ ಕೇಂದ್ರ ಮಕ್ಕಳ ಸುರಕ್ಷತಾ ಕೇಂದ್ರವಾಗಬೇಕೆಂಬುದು. ಅದರಂತೆ ಪರೀಕ್ಷೆಗಳು ಸುರಕ್ಷಿತವಾಗಿ ನಡೆದಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net