ಇಬ್ಬರು ಗಂಡುಮಕ್ಕಳಿದ್ದರೂ ಪಾಲಕರು ‘ಅನಾಥ’: ಹಿರಿಯ ಜೀವಗಳ ನೆರವಿಗೆ ಧಾವಿಸಿದ ನಟ ಸುದೀಪ್‌

sudeep
Published on

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ಬಹುತೇಕ ಪಾಲಕರು ತಮ್ಮ ಕುಟುಂಬಕ್ಕೆ ಆಸರೆಯಾಗಿ ಗಂಡುಮಕ್ಕಳು ಇರಲಿ ಎಂದು ಆಶಿಸುತ್ತಾರೆ. ಆದರೆ ಇಲ್ಲೊಂದು ಪ್ರಕರಣದಲ್ಲಿ ಇಬ್ಬರು ಗಂಡುಮಕ್ಕಳಿದ್ದರೂ ಇಳಿವಯಸ್ಸಿನಲ್ಲಿ ಆಸರೆಯಾಗದೇ ನೊಂದುಹೋಗಿದ್ದು, ಅವರ ನೆರವಿಗೆ ನಟ ಸುದೀಪ್‌ ಮುಂದಾಗಿದ್ದಾರೆ.

ದೊಡ್ಡಬಳ್ಳಾಪುರದ ಶ್ರೀನಿವಾಸ್‌ (78) ಮತ್ತು ಕಮಲಮ್ಮ (70) ದಂಪತಿಗೆ ನೆರವಾಗಿದ್ದಾರೆ ಸುದೀಪ್‌. ಈ ವೃದ್ಧ ದಂಪತಿಗೆ ಇಳಿವಯಸ್ಸಿನಲ್ಲಿ ಸಮೀಪದಲ್ಲಿ ಯಾರೂ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಕಾಲದಲ್ಲಿ ಸುದೀಪ್‌ ನೆರವಾಗಿದ್ದಾರೆ.

ಈ ದಂಪತಿಗೆ ಇಬ್ಬರು ಪುತ್ರರಿದ್ದಾರೆ. ಒಬ್ಬ ಮಗನಿಗೆ ಕಾಲಿಲ್ಲ. ಅಪ್ಪ ಅಮ್ಮನನ್ನು ನೋಡಿಕೊಳ್ಳಲಾಗುತ್ತಿಲ್ಲ. ಇನ್ನೊಬ್ಬ ಮಗ ಮೈಸೂರಿನಲ್ಲಿ ನೆಲೆಸಿದ್ದು, ಅಮ್ಮ ಅಪ್ಪ ನನ್ನ ಪಾಲಿಗೆ ಎಲ್ಲ ಎಂದು ಹೇಳಿ ಹೋಗಿದ್ದಾನಂತೆ. ಆದ್ದರಿಂದ ಈ ಹಿರಿಯ ಜೀವಗಳು ಅನಾಥವಾಗಿವೆ. ಇವರ ಕಷ್ಟ ಕೇಳಿ ಸಹಾಯಕ್ಕೆ ಬಂದ್ದಿದ್ದಾರೆ ಸುದೀಪ್.

ಬೆಂಗಳೂರಿನಲ್ಲಿ ಇದ್ದ ಆಸ್ತಿಯನ್ನೆಲ್ಲಾ ಮಾರಿ ದೊಡ್ಡ ಬಳ್ಳಾಪುರದಲ್ಲಿ ಬಾಡಿಗೆ ಮನೆಯಲ್ಲಿರುವ ಈ ವೃದ್ಧ ದಂಪತಿಯ ಊಟ, ವಸತಿ ಆರೋಗ್ಯದ ಸಂಪೂರ್ಣ ಜವಾಬ್ದಾರಿ ಹೊತ್ತುಕೊಂಡಿದ್ದಾರೆ.

ಕಮಲಮ್ಮನವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ವತಿಯಿಂದ ಶಸ್ತ್ರಚಿಕಿತ್ಸೆ ಮಾಡಿಸಲು ನಿರ್ಧಾರ ಮಾಡಿದ್ದಾರೆ. ಈ ಸಂಬಂಧ ಸೊಸೈಟಿ ಅಧ್ಯಕ್ಷ ರಮೇಶ್ ಕಿಟ್ಟಿ ದಂಪತಿಯನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಜೈನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ತಯಾರಿ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net