VIDEO: ಮೈಸೂರಿನ ಮನೆಯಲ್ಲಿ ನಾಗರ- ಮಲಗಿದ್ದ ಬಾಲಕನ ಮೈಮೇಲೆ ಹರಿದು ಅಡಗಿಕುಳಿತ ಹಾವು!

1282712
Published on

ಮೈಸೂರು: ನಿನ್ನೆ ಭಾನುವಾರವಷ್ಟೇ ತುಮಕೂರಿನ ಮನೆಯೊಂದರ ಹೊರಗೆ ಇದ್ದ ಶೂಸ್‌ನಲ್ಲಿ ನಾಗರಹಾವಿನ ಮರಿಯೊಂದು ಮಲಗಿದ್ದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಮೈಸೂರಿನ ಹೆಬ್ಬಾಳ ಮನೆಯ ಒಳಗೆ ನಾಗರಹಾವು ಕಾಣಸಿಕೊಂಡು ಆತಂಕ ಮೂಡಿಸಿರುವ ಘಟನೆ ನಡೆದಿದೆ.

ಹೆಬ್ಬಾಳದ ನಿವಾಸಿ ಮಂಗಲ್ ಅವರ ಮನೆಯೊಳಕ್ಕೆ ಹಾವು ನುಗ್ಗಿದೆ. ಮಂಗಲ್ ಅವರ ಮಗ ಜೀತು ಮಲಗಿದ್ದಾಗ ಆತನ ಮೇಲೆ ಹಾವು ಹರಿದು ಹೋಗಿದೆ. ತಕ್ಷಣವೇ ಜೀತು ಹಾವನ್ನು ದೂರ ಎಸೆದಿದ್ದಾನೆ. ಅದೃಷ್ಟವಶಾತ್‌ ಅದು ಆತನಿಗೆ ಕಚ್ಚಲಿಲ್ಲ. ಈ ಹಿನ್ನೆಲೆಯಲ್ಲಿ ಜೀತು ಸುರಕ್ಷಿತವಾಗಿದ್ದಾನೆ.

ಕೊನೆಗೆ ಗಲಾಟೆಯಾದಾಗ, ಹಾವು ಮನೆಯ ಟಿವಿ ಸ್ಟ್ಯಾಂಡ್ ಕೆಳಗೆ ಅಡಗಿ ಕುಳಿತಿತ್ತು. ಉರಗ ಸಂರಕ್ಷಕ ಸೂರ್ಯಕೀರ್ತಿ ಅವರನ್ನು ಕರೆಸಿ ಹಾವನ್ನು ರಕ್ಷಣೆ ಮಾಡಲಾಗಿದೆ. ಹಾವನ್ನು ಸುರಕ್ಷಿತ ಸ್ಥಳಕ್ಕೆ ಬಿಡಲಾಗಿದೆ.

ವಿಡಿಯೋ ಇಲ್ಲಿದೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net