

ಮೈಸೂರು: ಮೈಸೂರಿನ ವಿದ್ಯಾರಣ್ಯಪುರಂ ಬಳಿ ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ಹಾವೊಂದು ಭಾರಿ ಕೋಲಾಹಲ ಸೃಷ್ಟಿಸಿತು.
ಮೋದಿ ಯುಗ ಉತ್ಸವ ಕಾರ್ಯಕ್ರಮಕ್ಕೆ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಗಣ್ಯರು ಆಗಮಿಸಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಆ ಸಂದರ್ಭದಲ್ಲಿ ಅಲ್ಲಿಯೇ ನಿಲ್ಲಿಸಿದ್ದ ಬೈಕ್ ಒಂದರಲ್ಲಿ ಚಿಕ್ಕ ಹಾವಿನ ಮರಿ ಸೇರಿಕೊಂಡು ಬಿಟ್ಟಿತು.
ಇದನ್ನು ಅಲ್ಲಿಯೇ ಇದ್ದವರು ನೋಡಿದರು. ನಂತರ ಈ ಸುದ್ದಿ ಎಲ್ಲೆಡೆ ಹರಡಿ ಒಂದು ಕ್ಷಣ ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಯಾವ ಹಾವು, ಏನು ಎತ್ತ ಎಂದು ತಿಳಿಯದ ಜನರು ಗಲಿಬಿಲಿಗೊಂಡರು. ಅದು ಬೈಕ್ ಒಳಗೇ ಇದೆಯೋ, ಇನ್ನೆಲ್ಲಿ ಹೋಯಿತೋ ಎಂಬ ಆತಂಕ ಕಾಡಿತು. ಕೂಡಲೇ ಉರಗ ಸಂರಕ್ಷಕ ಅಯ್ಯ ಎನ್ನುವವರನ್ನು ಸ್ಥಳಕ್ಕೆ ಕರೆಸಲಾಯಿತು.
ಅರ್ಧ ಗಂಟೆ ಎಲ್ಲೆಡೆ ಹುಡುಕಾಟ ನಡೆಸಿದ ಅಯ್ಯ ಅವರಿಗೆ ಕೊನೆಗೂ ಬೈಕ್‌ನಲ್ಲಿ ಚಿಕ್ಕ ಮರಿ ಸಿಕ್ಕಿತು. ಅದನ್ನು ಸಂರಕ್ಷಣೆ ಮಾಡಿ ಕರೆದುಕೊಂಡು ಹೋಗಲಾಯಿತು.
ಇಲ್ಲಿವೆ ನೋಡಿ ಹಾವು ಹಿಡಿದ ವಿಡಿಯೋ: