VIDEO: ಗಾಡಿ ಸ್ಟಾರ್ಟ್​ ಮಾಡುವಾಗ ಇರಲಿ ಎಚ್ಚರ! ಮೈಸೂರು, ತುಮಕೂರಿನಲ್ಲಿ ಬೈಕ್​ ಒಳಗೆ ಕುಳಿತ ಬೃಹತ್​ ನಾಗರ...

snake
Published on

ಮೈಸೂರು/ತುಮಕೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬೈಕ್​ನಲ್ಲಿ ಭಾರಿ ಗಾತ್ರದ ನಾಗರ ಹಾವು ಅಡಗಿ ಕುಳಿತು ಬೆಚ್ಚಿಬೀಳಿಸಿರುವ ಘಟನೆ ನಡೆದಿದೆ.

ಮೈಸೂರು ಮತ್ತು ತುಮಕೂರಿನಲ್ಲಿ ಈ ಘಟನೆ ನಡೆದಿದೆ.

ಸೂರಿನ ಮಧುವನ ಬಡಾವಣೆಯ ನಿವಾಸವೊಂದರಲ್ಲಿ ನಿಂತಿದ್ದ ಬೈಕ್​ಗೆ ನಾಗರಹಾವು ಸೇರಿಕೊಂಡಿತ್ತು. ಬೈಕ್​ನ ಹೆಡ್ ಲೈಟ್ ಬಳಿ ನುಸುಳಿಕೊಂಡಿತ್ತು, ಬೈಕ್ ತೆಗೆಯಲು ಮುಂದಾದಾಗ ಹಾವು ಕಾಣಿಸಿಕೊಂಡಿದೆ. ಕೂಡಲೇ ಉರಗ ರಕ್ಷಕ ಸ್ನೇಕ್ ರಮೇಶ್ ಅವರನ್ನು ಕರೆಸಿ, ಬೃಹತ್​ ಗಾತ್ರದ ನಾಗರಹಾವನ್ನು ಹಿಡಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ತುಮಕೂರು ನಗರದ ರಂಗಾಪುರದಲ್ಲಿಯೂ ಬೈಕ್​ನಲ್ಲಿ ಮರಿ ನಾಗರಹಾವು ಕಂಡಿದೆ. ಬೈಕ್​ನಲ್ಲಿ ಸೇರಿಕೊಂಡಿದ್ದ ಹಾವು ನೋಡಿ ಬೆಚ್ಚಿಬಿದ್ದಿದ್ದಾರೆ ಬೈಕ್ ಮಾಲೀಕ. ಶರತ್. ಮನೆ ಬಳಿ ನಿಲ್ಲಿಸಿದ್ದ ವೇಳೆ ಬೈಕ್ ಒಳಗೆ ನಾಗರಹಾವು ಸೇರಿಕೊಂಡಿತ್ತು. ಕೂಡಲೇ ಅವರು ಉರಗ ತಜ್ಞ ದಿಲೀಪ್ ಗೆ ಕರೆ ಮಾಡಿ ಮಾಹಿತಿ ನೀಡಿದರು.

ಉರಗ ತಜ್ಞ ದಿಲೀಪ್ ರಿಂದ ನಾಗರಹಾವು ರಕ್ಷಣೆ ಮಾಡಿದ್ದು, ತುಮಕೂರು ಹೊರವಲಯದ ಅರಣ್ಯ ಪ್ರದೇಶಕ್ಕೆ ನಾಗರಹಾವು ಬಿಟ್ಟು ಬರಲಾಗಿದೆ (ದಿಗ್ವಿಜಯ ನ್ಯೂಸ್​)

ವಿಡಿಯೋಗಳು ಇಲ್ಲಿವೆ ನೋಡಿ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net