ವಸತಿ ರಹಿತರಿಗೆ ಗುಡ್‌ನ್ಯೂಸ್: 1.97 ಲಕ್ಷ ನಿವೇಶನ ಹಂಚಿಕೆಗೆ ರೆಡಿಯಾಯ್ತು 6 ಸಾವಿರ ಎಕರೆ

somanna
Published on

ಬೆಂಗಳೂರು: ರಾಜ್ಯಾದ್ಯಂತ ವಸತಿ ರಹಿತರಿಗೆ ನಿವೇಶನ ಹಂಚಿಕೆ ಮಾಡಲು ಅಗತ್ಯ ಭೂಮಿ ಸಿದ್ಧವಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ವಿಧಾನಸಭೆಯಲ್ಲಿ ಹೇಳಿದರು.

ಪ್ರಶ್ನೋತ್ತರ ವೇಳೆ ನಾಗಠಾಣ ಶಾಸಕ ದೇವಾನಂದ್ ಪುಲ್‌ಸಿಂಗ್ ಚವಾಣ್ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಸಚಿವರು, ಒಟ್ಟಾರೆ 6 ಸಾವಿರ ಎಕರೆ ಭೂಮಿ ನಿವೇಶನ ಹಂಚಿಕೆಗಾಗಿಯೇ ರಾಜೀವ್ ಗಾಂಧಿ ವಸತಿ ನಿಗಮದ ಬಳಿ ಇದೆ. ತಮ್ಮ ತಮ್ಮ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಭೂಮಿ ಗುರುತಿಸುವಂತೆ ಈಗಾಗಲೇ ಎಲ್ಲ ಶಾಸಕರಿಗೆ ಪತ್ರ ಬರೆದಿದ್ದಾಗಿಯೂ ತಿಳಿಸಿದರು.

ನಗರ ಪ್ರದೇಶದಲ್ಲಿ 3539 ಎಕರೆ, ಗ್ರಾಮಾಂತರ ಪ್ರದೇಶದಲ್ಲಿ 2792 ಎಕರೆ ಭೂಮಿ ನಿವೇಶನ ಉದ್ದೇಶಕ್ಕೆ ಕಾಯ್ದಿರಿಸಲಾಗಿದೆ. ಒಟ್ಟಾರೆ 1.97 ಲಕ್ಷ ನಿವೇಶನ ಹಂಚಿಕೆ ಮಾಡಲು ಅವಕಾಶವಿದೆ. ಶೀಘ್ರವೇ ನಿವೇಶನ ಹಂಚಿಕೆ ಸಂಬಂಧ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ನಾಗಠಾಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ವಸತಿ ಇಲಾಖೆ ಕೈಗೊಂಡ ತೀರ್ಮಾನಕ್ಕೆ ಶಾಸಕರು ಸದನದಲ್ಲಿ ಸಚಿವರಿಗೆ ಅಭಿನಂದನೆಯನ್ನೂ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net