ಅಕ್ರಮ ಗಣಿಗಾರಿಕೆ ತನಿಖೆ, ಎಸ್‌ಐಟಿ‌ ಅವಧಿ ಐದು ತಿಂಗಳು ವಿಸ್ತರಣೆ

mining
Published on

ಬೆಂಗಳೂರು: ಅಕ್ರಮ ಗಣಿಗಾರಿಕೆಗಳ ಕುರಿತು ರಚನೆಯಾಗಿರುವ ಎಸ್ಐಟಿ ಕಾರ್ಯಾವಧಿ 5 ತಿಂಗಳ ಕಾಲ ಮುಂದುವರಿಸಲಾಗಿದೆ.

ವಿಧಾನಸೌಧದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರೂ‌ ಆದ ಸಂಪುಟ ಉಪಸಮಿತಿ ಅಧ್ಯಕ್ಷ ಜೆ.ಸಿ.ಮಾಧುಸ್ವಾಮಿ‌ ನಿಗದಿತ ಗಡುವಿನೊಳಗೆ ತನಿಖೆ ಪೂರ್ಣಗೊಳಿಸಲೇಬೇಕು ಎಂದು ಸೂಚಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಎಸ್ ಐಟಿ ಮುಂದಿನ 5 ತಿಂಗಳೊಳಗೆ ಸಂಪೂರ್ಣ ವರದಿ ಸಲ್ಲಿಸಲೇಬೇಕು.

ತನಿಖೆ ಹಂತದಲ್ಲಿ ಪರಸ್ಪರ ಇಲಾಖಾ ನಿಂದನೆ ಬೇಡ. ಐದು ತಿಂಗಳಲ್ಲಿ ಎಲ್ಲಾ ಮುಗಿಸಿ ಎಸ್ಐಟಿ ಕ್ಲೋಸ್ ಮಾಡಲೇಬೇಕು ಎಂದು ಸಂಪುಟ ಉಪಸಮಿತಿ ಸಭೆಯಲ್ಲಿ ಎಸ್ ಐಟಿಗೆ ಸ್ಪಷ್ಟ ಸೂಚನೆ ನೀಡಿದ ಜೆ.ಸಿ. ಮಾಧುಸ್ವಾಮಿ. ಏಳು ವರ್ಷಗಳಿಂದ ಅಸ್ತಿತ್ವದಲ್ಲಿರುವ ಎಸ್ ಐಟಿ ಅಕ್ರಮ ಗಣಿಗಾರಿಕೆಗಳ‌ ಕುರಿತು ತನಿಖೆ ನಡೆಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net