ಉಸ್ಸಪ್ಪಾ ಈ ಪಾದಯಾತ್ರೆ ನನ್ನಿಂದ ಆಗಲ್ಲಪ್ಪಾ.... ಜೋಶ್‌ನಲ್ಲಿ ಹೋದ ಸಿದ್ದು ಸುಸ್ತಾಗಿ ವಾಪಸ್‌!

mekedatu-siddu
Published on

ರಾಮನಗರ: ವೀಕೆಂಡ್‌ ಕರ್ಫ್ಯೂ ನಡುವೆಯೂ ಯಾರ ಮಾತನ್ನೂ ಕೇಳದೇ ಕಾಂಗ್ರೆಸ್‌ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಪಾದಯಾತ್ರೆ ಕೈಗೊಂಡಿದ್ದಾರೆ. ನಮ್ಮ ನೀರು, ನಮ್ಮ ಹಕ್ಕು ಎನ್ನುತ್ತಾ ಜೋಶ್‌ನಿಂದ ಮುನ್ನುಗ್ಗುತ್ತಿದ್ದಾರೆ.

ಆದರೆ ನಾಲ್ಕು ಕಿಲೋ ಮೀಟರ್‌ ನಡೆಯುತ್ತಲೇ 73 ವರ್ಷದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುಸ್ತಾಗಿ ಹೋಗಿದ್ದಾರೆ. ಕನಕಪುರ ತಾಲ್ಲೂಕಿನ ಕಾವೇರಿ ತಟ, ಸಂಗಮದಲ್ಲಿ ಚಾಲನೆ ದೊರೆತ ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಸುಮಾರು ನಾಲ್ಕು ಕಿಲೋ ಮೀಟರ್‌ ದೂರ ಕ್ರಮಿಸಿದ್ದರು. ಆದರೆ ವಯೋಸಹಜದಿಂದಾಗಿ ಸಿದ್ದರಾಮಯ್ಯನವರು ಇಷ್ಟೊಂದು ನಡೆದು ಸುಸ್ತಾಗಿದ್ದಾರೆ.

ಆದ್ದರಿಂದ ಅವರು ಕಾರೊಂದರಲ್ಲಿ ವಾಪಸಾಗಿರುವುದಾಗಿ ವರದಿಯಾಗಿದೆ. ಕಾಂಗ್ರೆಸ್‌ ಕಾರ್ಯಕರ್ತರು ಇಂದು 15 ಕಿ.ಮೀ. ಪಾದಯಾತ್ರೆ ನಡೆಸಿ ಕನಕಪುರ ತಲುಪಲು ಯೋಜನೆ ಹಾಕಿಕೊಂಡಿದ್ದಾರೆ. ಆದರೆ ನಾಲ್ಕು ಕಿಲೋಮೀಟರ್‌ ನಡೆಯುವಾಗಲೇ ಸಿದ್ದರಾಮಯ್ಯ ಮುಂದಕ್ಕೆ ನಡೆಯಲು ಸಾಧ್ಯವಾಗಲೇ ಸುಸ್ತಾಗಿ ಕುಳಿತುಕೊಂಡಿದ್ದರಿಂದ ಅವರನ್ನು ಕಾರಿನಲ್ಲಿ ವಾಪಸ್‌ ಕಳುಹಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net