ಎಲ್ಲಿ ನಿಲ್ತೇನೋ ಗೊತ್ತಿಲ್ಲ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸಲ್ಲ ಎಂದ ಸಿದ್ದರಾಮಯ್ಯ

siddu
Published on

ಮಂಡ್ಯ: ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ. ಬೇರೆಲ್ಲಿ ಎಂದು ತಿಳಿದಿಲ್ಲ. ಆದರೆ ಚಾಮುಂಡಿ ಕ್ಷೇತ್ರದಿಂದ ಮಾತ್ರ ಸ್ಪರ್ಧಿಸಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಂಡ್ಯದ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ನಿಲ್ಲುವಂತೆ ಒತ್ತಡ ಬರುತ್ತಿದೆ. ಎಲ್ಲಿ ನಿಲ್ಲಬೇಕು ಎಂದು ತೀರ್ಮಾನಿಸಿಲ್ಲ. ಆದರೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದರು.

ಅವಧಿಗೂ ಮುನ್ನ ರಾಜ್ಯದಲ್ಲಿ ಚುನಾವಣೆ ಮಾಡಲಾಗುತ್ತದೆ ಎಂಬ ಸುದ್ದಿಯ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಇದು ಬಹುಶಃ ನನಗನಿಸುವಂತೆ ಆಗಲ್ಲ. ಅವಧಿಗೆ ಮುನ್ನ ಚುನಾವಣೆ ನಡೆಯುವುದು ಸಂದೇಹ. ಈ ಬಗ್ಗೆ ಸ್ವತಃ ಬಿಜೆಪಿ ನಾಯಕರೇ ಹೇಳಿದ್ದಾರೆ ಎಂದರು.

2023ರ ಏಪ್ರಿಲ್‌ನಲ್ಲಿ ಚುನಾವಣೆ ಇರೋದು. ಅವಧಿಗೂ ಮುನ್ನ ಯಾಕಾಗಿ ಚುನಾವಣೆ ಮಾಡ್ತಾರೆ. ಇದೆಲ್ಲ ಊಹಾಪೋಹಗಳಷ್ಟೇ ಅಂತ ಹೇಳಿದ್ದಾರೆ. ಇದೇ ವೇಳೆ, ಅವಧಿಗೂ ಮುನ್ನ ಚುನಾವಣೆ ಬಂದ್ರೆ ನಾವು ಸಿದ್ಧರಿದ್ದೇವೆ. ಜನರು ನಮ್ಮ ಪರವಾಗಿದ್ದಾರೆ ಅಂತ ಸಿದ್ದರಾಮಯ್ಯ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net