ಎಸ್.ಎಸ್.ಪಾಟೀಲ್ ಕಡಗಂಚಿ  ಪ್ರಥಮ ಸ್ಮರಣೆ ಇಂದು : ಕರ್ಮಯೋಗಿ ಪ್ರಶಸ್ತಿ ಪ್ರದಾನ

IMG-20230823-WA0001
Published on

ನಾಡೋಜ ನನು ಬಳಿಗಾರ ಉದ್ಯಮಿ ಲಿಂಗರಾಜ ಪಾಟೀಲ್ ಹೇಳಿಕೆ : ಶ್ರೇಷ್ಠರು ಪ್ರಶಸ್ತಿಗೆ ಆಯ್ಕೆ : ಸಚಿವ ಪಾಟೀಲ್ ಭಾಗಿ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಾಡಿನ ಖ್ಯಾತ ಉದ್ಯಮಿಗಳಾಗಿದ್ದ ರಾಜ್ಯ ಪ್ರಶಸ್ತಿ ಪುರಸ್ಕೃತ ದಿ.ಎಸ್.ಎಸ್.ಪಾಟೀಲ್ ಕಡಗಂಚಿ ಅವರ ಪ್ರಥಮ ಪುಣ್ಯ ಸ್ಮರಣೆ  ನಿಮಿತ್ತ ಕರ್ಮಯೋಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ.೨೩ರಂದು ಬೆಳಗ್ಗೆ ೧೧.೩೦ಕ್ಕೆ ನಗರದ  ಸೂಪರ್ ಮಾರ್ಕೇಟ್‌ನಲ್ಲಿರುವ ಸಂಗಮ-ತ್ರಿವೇಣಿ ಚಿತ್ರಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು  ಕಸಾಪ ನಿಟಕಪೂರ್ವ ಅಧ್ಯಕ್ಷ ನಾಡೋಜ ಡಾ.ಮನು ಬಳಿಗಾರ ಹಾಗೂ ಪಾಟೀಲ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಧ್ಯಕ್ಷ ಡಾ.ಲಿಂಗರಾಜ.ಎಸ್.ಪಾಟೀಲï ಕಡಗಂಚಿ ತಿಳಿಸಿದರು.
ಎಸ್.ಆರ್.ಪಾಟೀಲï ಫೌಂಡೇಷನ್ ಪಾಟೀಲï ಗ್ರೂಪ್ಸ್ ಆಫ್ ಇಂಡಸ್ಟ್ರೀಸ್ ಸಹಯೋಗದಲ್ಲಿ  ಆಯೋಜಿಸಿರುವ ಸಮಾರಂಭದ ಸನ್ನಿಧಾನವನ್ನು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಎಸ್.ಅಪ್ಪ ವಹಿಸುವರು. ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ವೈದ್ಯಕೀಯ ಶಿP್ಷÀಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರು ಜಂಟಿಯಾಗಿ ಉದ್ಘಾಟಿಸುವರು ಎಂದು ಮಂಗಳವಾರ ನಗರದಲ್ಲಿ ಜಂಟಿಯಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಸ್.ಆರ್.ಪಾಟೀಲï ಫೌಂಡೇಷನ್ ಗೌರವಾಧ್ಯಕ್ಷೆ ಸರೋಜಿನಿದೇವಿ ಎಸ್.ಪಾಟೀಲï ಘನ ಉಪಸ್ಥಿತಿಯಲ್ಲಿ ನಾಡೋಜ ಡಾ.ಮನು ಬಳಿಗಾರ ಅಧ್ಯP್ಷÀತೆ ವಹಿಸಲಿz್ದÁರೆ. ಜಿ.ಆರ್.ಪಾಟೀಲï ಆ್ಯಂಡ್ ಕಂಪನಿ ನಿರ್ದೇಶಕ ರೇವಣಸಿದ್ದಪ್ಪ ಜಿ.ಪಾಟೀಲï ಮೊದಲಾದವರು ಪಾಲ್ಗೊಳ್ಳುವರು ಎಂದು ಬಳಿಗಾರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ  ಪಾಟೀಲï ಗ್ರೂಪ್ ಆಫ್ ಇಂಡಸ್ಟಿçÃಸ್ ನಿರ್ದೇಶಕ ಸಿದ್ಧಲಿಂಗ ಪಾಟೀಲï, ಕಾರ್ತಿಕ ಎಲï. ಪಾಟೀಲï, ಶಿವಲಿಂಗಯ್ಯ ಮಠಪತಿ ಮೊದಲಾದವರಿದ್ದರು.
, ಸೇಡಂ ಬಜಾಜ ಪೋತೆ ಸೇರಿ ಐವರಿಗೆ ಕರ್ಮಯೋಗಿ ಪ್ರಶಸ್ತಿ
ವಿಜಯಪುರದ ಬಿಎಲ್‌ಡಿ ಶಿಕ್ಷಣ ಸಂಸ್ಥೆಯ ಅಧ್ಯP್ಷÀರು  ಆಗಿರುವ ಕೈಗಾರಿಕೆ ಸಚಿವ  ಡಾ.ಎಂ.ಬಿ.ಪಾಟೀಲï(ಶಿಕ್ಷಣ),  ಮಾಜಿ  ಸಂಸದ ಡಾ.ಬಸವರಾಜ ಪಾಟೀಲï ಸೇಡಂ(ಸಮಾಜ ಸೇವೆ), ಬಜಾಜï ಅರ್ಥ್ಸ್ ಲಿಮಿಟೆಡ್ ಮುಖ್ಯಸ್ಥ ಶ್ಯಾಮ ಬಜಾಜ್ (ಉದ್ಯಮ), ಕರ್ನಾಟಕ ಲಲಿತಕಲಾ ಅಡಾಡೆಮಿ  ಮಾಜಿ ಅಧ್ಯಕ್ಷ ನಾಡೋಜ ಡಾ.ಜೆ.ಎಸ್.ಖಂಡೇರಾವ(ಲಲಿತಕಲೆ) ಹಾಗೂ ಗುಲ್ಬರ್ಗ ವಿವಿ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ  ಡಾ.ಎಚ್.ಟಿ.ಪೋತೆ(ಸಾಹಿತ್ಯ) ಅವರಿಗೆ ಕರ್ಮಯೋಗಿ ಪ್ರಶಸ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಲಿಂಗರಾಜ ಪಾಟೀಲ್ ಮತ್ತು ಮನು ಬಳಿಗಾರ ತಿಳಿಸಿದರು. ಪ್ರಶಸ್ತಿ ತಲಾ ರೂ.೫೧ ಸಾವಿರ ಗೌರದ ಧನ ಫಲಕ ಹೊಂದಿರಲಿದೆ. ಆಯಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ಕರ್ಮಯೋಗಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net