ಜೈಲಲ್ಲಿರುವ ರೌಡಿಯ ಪತ್ನಿಯ ಜತೆ ಅಕ್ರಮ ಸಂಬಂಧ: ರೌಡಿಶೀಟರ್‌ನ ಕುತ್ತಿಗೆ ಸೀಳಿ ಬರ್ಬರ ಕೊಲೆ!

death2
ಕೊಲೆಯಾದ ಸ್ಥಳ, ಅನೀಸ್‌ ಹಾಗೂ ಕೊಲೆಯಾದ ಸೈಯದ್‌
Published on

ಬೆಂಗಳೂರು: ರಶೀದ್ ಮಲಬಾರಿ ಗ್ಯಾಂಗ್‌ನಲ್ಲಿ ಗುರುತಿಸಿಕೊಂಡಿದ್ದವನ ಕುಖ್ಯಾತ ರೌಡಿ ಶೀಟರ್‌ ಸೈಯದ್ ಕರೀಂ ಅಲಿ ಎಂಬಾತನನ್ನು ನಗರದಲ್ಲಿ ಕೊಲೆ ಮಾಡಲಾಗಿದೆ.

ಬೇರೊಬ್ಬನ ಪತ್ನಿಯ ಜತೆ ಈತ ಅಕ್ರಮ ಸಂಬಂಧ ಹೊಂದಿದ್ದು ಅದೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಇಂದು ಬೆಳಗ್ಗೆ ಸೈಯದ್‌ನನ್ನು ಚಾಕುವಿನಿಂದ ಚುಚ್ಚಿ, ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿದೆ. ಬೆಂಗಳೂರಿನ ಗೋವಿಂದ ಪುರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಸೈಯದ್‌ ಇನ್ನೋರ್ಚ ರೌಡಿ ಅನೀಸ್ ಎಂಬಾತನ ಪತ್ನಿ ಜೊತೆಗೆ ಸಂಪರ್ಕ ಹೊಂದಿದ್ದ ಎನ್ನಲಾಗಿದೆ. ಕ್ರಿಮಿನಲ್‌ ಪ್ರಕರಣದಲ್ಲಿ ಅನೀಸ್ ಜೈಲಿನಲ್ಲಿದ್ದು, ಈ ವೇಳೆ ಅಕ್ರಮ ಸಂಬಂಧ ಹೊಂದಿದ್ದ ಸೈಯದ್‌. ಇದೇ ಕಾರಣದಿಂದ ಕೊಲೆಯಾಗಿದ್ದು, ಕೊಲೆ ಮಾಡಿ ಆರೋಪಿಗಳು ಎಸ್ಕೇಪ್ ಅಗಿದ್ದಾರೆ.

ಕ್ರಿಮಿನಲ್‌ ಪ್ರಕರಣದಲ್ಲಿ ಭಾಗಿಯಾಗಿದ್ದ ಅನೀಸ್‌ನ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಅರೆಸ್ಟ್‌ ಮಾಡಿದ್ದರು. ಕೊಲೆಗೆ ಇದೇ ಜಾಗವನ್ನು ಅನೀಸ್‌ ಫಿಕ್ಸ್‌ ಮಾಡಿದ್ದು, ಅಲ್ಲಿಯೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net