

ರಾಮನಗರ ಜಿಲ್ಲಾ ನ್ಯಾಯಾಲಯ ಟಕದ ಅಧೀನ ನ್ಯಾಯಾಲಯಗಳಲ್ಲಿ ಖಾಲಿ ಇರುವ ಜವಾನ ಮತ್ತು ಆದೇಶ ಜಾರಿಕಾರ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಎಲ್ಲ ಹುದ್ದೆಗಳಿಗೂ ಮೀಸಲಾತಿ ಅನ್ವಯವಾಗಲಿದೆ.
ಹುದ್ದೆಗಳ ವಿವರ
* ಜವಾನ 21 ಹುದ್ದೆಗಳಿದ್ದು, ಇತರ ಅಭ್ಯರ್ಥಿಗೆ 3 ಸ್ಥಾನ, ಮಹಿಳೆ--5, ಮಾಜಿ ಸೈನಿಕ-1, ಗ್ರಾಮೀಣ-6, ಅಂಗವಿಕಲ-4 ಕನ್ನಡ ಮಾಧ್ಯಮ ಅಭ್ಯರ್ಥಿಗೆ 2 ಸ್ಥಾನ ಮೀಸಲಿಡಲಾಗಿದೆ.
* ಆದೇಶ ಜಾರಿಕಾರ ಆರು ಹುದ್ದೆಗಳಿದ್ದು, ಇತರ-2, ಮಾಜಿ ಸೈನಿಕ-1, ಅಂಗವಿಕಲ-2 ಮತ್ತು ಗ್ರಾಮೀಣ ಅಭ್ಯರ್ಥಿಗೆ 1 ಸ್ಥಾನ ಮೀಸಲಿಡಲಾಗಿದೆ.
ಶೈಣಿಕ ಅರ್ಹತೆ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣತೆ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರಬೇಕು. ಆದೇಶ ಜಾರಿಕಾರ ಹುದ್ದೆಗೂ ಇದೇ ವಿದ್ಯಾರ್ಹತೆ ಅನ್ವಯವಾಗಲಿದ್ದು, ಡ್ರೈವಿಂಗ್ ಲೈಸೆನ್ಸ್ ಹೊಂದಿರುವವರಿಗೆ ಮೊದಲ ಆದ್ಯತೆ ನೀಡಲಾಗುವುದು.
ವೇತನ
ಜವಾನ ಹುದ್ದೆಗೆ 17,000ದಿಂದ 28,950 ರೂ. ಇರಲಿದೆ. ಆದೇಶ ಜಾರಿಕಾರ ಹುದ್ದೆಗೆ 19,950ರಿಂದ 37,900 ರೂ. ಇರಲಿದೆ. ಇದರೊಂದಿಗೆ ಇತರ ಸರ್ಕಾರಿ ಭತ್ಯೆ ಇರಲಿದೆ.
ವಯೋಮಿತಿ
ಎರಡೂ ಹುದ್ದೆಗಳಿಗೆ ಕನಿಷ್ಠ ವಯೋಮಿತಿ 18 ವರ್ಷ ಇದ್ದು, ಗರಿಷ್ಠ ವಯೋಮಿತಿ ಸಾಮಾನ್ಯ ಅಭ್ಯರ್ಥಿಗೆ 35, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗೆ 38 ಮತ್ತು ಪ.ಜಾತಿ, ಪ.ಪಂ ಅಭ್ಯರ್ಥಿಗಳಿಗೆ 40 ವರ್ಷ ನಿಗದಿಪಡಿಸಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಸೂಚನೆಯಲ್ಲಿ ನೀಡಲಾದ ವಿಳಾಸಕ್ಕೆ ದಾಖಲಾತಿ ಸಮೇತ ಅರ್ಜಿ ಸಲ್ಲಿಸತಕ್ಕದ್ದು. ಮಹಿಳಾ ಅಭ್ಯರ್ಥಿ ಮೀಸಲಾತಿಯನ್ನು ಅರ್ಹರು ಇಲ್ಲದಿದ್ದರೆ ಆಯಾ ಪಂಗಡಗಳ ಇತರ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುವುದು. ಸಾಮಾನ್ಯ ಅಭ್ಯರ್ಥಿಗೆ 200 ರೂ. ಅರ್ಜಿ ಶುಲ್ಕವಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ 100 ರೂ. ಇರಲಿದೆ.
ಆಯ್ಕೆ ಪ್ರಕ್ರಿಯೆ
ಆದೇಶ ಜಾರಿಕಾರ ಹುದ್ದೆಗೆ ಎಸ್ಎಸ್ಎಲ್ಸಿಯಲ್ಲಿ ಗಳಿಸಿರುವ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ಒಂದು ಹುದ್ದೆಗೆ 25 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಿ ಅಲ್ಲಿನ ಅಂಕಗಳ ಆಧಾರದ ಮೇಲೆ ಸೇವಕ ಹುದ್ದೆಗೆ ಆಯ್ಕೆ ಮಾಡಲಾಗುವುದು. ಜವಾನ ಹುದ್ದೆಗೆ ಇದೇ ಮಾದರಿಯಲ್ಲಿ 1:10 ಅನುಪಾತದಲ್ಲಿ ಆಯ್ಕೆ ಮಾಡಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 20.9.2022
ಅಧಿಸೂಚನೆಗೆ: https://bit.ly/3K7iURj, https://bit.ly/3KceXdT
ಮಾಹಿತಿಗೆ: http://districts.ecourts.gov.in