ಅನಿತಾ ಅವರ ಶಿಷ್ಯೆ ರಕ್ಷಿತಾ ರಂಗ ಪ್ರವೇಶಕ್ಕೆ ಸಿದ್ಧ

IMG_20230316_0004
Published on

ಮೈಸೂರು: ತಾಂತ್ರಿಕ ಶಿಕ್ಷಣದ ವಿದ್ಯಾರ್ಥಿನಿಯೊಬ್ಬರು ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ. ಖ್ಯಾತ ನೃತ್ಯ ಕಲಾವಿದೆ ವಿದುಷಿ ಸಿ.ಎನ್.ಅನಿತಾ ಅವರ ಶಿಷ್ಯೆ ಕುಮಾರಿ ಎಸ್.ರಕ್ಷಿತಾ ರಂಗ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ನೃತ್ಯ ವಿದ್ಯಾಪೀಠವು ನಗರದ ಕಲಾಮಂದಿರದಲ್ಲಿ ಮಾರ್ಚ್ 19ರ ಸಂಜೆ 5.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ರಕ್ಷಿತಾ ವಿವಿಧ ನೃತ್ಯಬಂಧಗಳನ್ನು ಪ್ರಸ್ತುತ ಪಡಿಸಲಿದ್ದಾರೆ.

ಇವರಿಗೆ ಗುರು ವಿದುಷಿ ಸಿ.ಎನ್.ಅನಿತಾ (ನೃತ್ಯ ಸಂಯೋಜನೆ ಮತ್ತು ನಟುವಾಂಗ), ವಿದ್ವಾನ್ ರಾಕೇಶ್ ಸುಧೀರ್(ಹಾಡುಗಾರಿಕೆ), ವಿದ್ವಾನ್ ಪಂಚಮ್ ಉಪಾಧ್ಯಾಯ(ಮೃದಂಗ), ವಿದ್ವಾನ್ ರಾಕೇಶ್ ದತ್(ವೇಣು ವಾದನ) ಹಾಗೂ ವಿದ್ವಾನ್ ವಿನಯ್ ರಂಗಧೋಳ್(ರಿದಂ ಪ್ಯಾಡ್) ಸಹಕಾರ ನೀಡಿಲಿದ್ದಾರೆ.

ಉದ್ಯಮಿ ಆರ್.ಶ್ಯಾಮಸುಂದರ್ ಹಾಗೂ ಎಚ್.ಸಿ.ಕವಿತಾ ಅವರ ಪುತ್ರಿ ರಕ್ಷಿತಾ ನಗರದ ಜಿಎಸ್‌ಎಸ್ ಎಸ್‌ಐಇಟಿಡ್ಲೂೃ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ (ಎಐಎಂಎಲ್) ವಿಭಾಗದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಭರತನಾಟ್ಯ ಮತ್ತು
ಕರ್ನಾಟಕ ಶಾಸ್ತ್ರೀಯ ಸಂಗೀತ ಸೀನಿಯರ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ವಿದ್ವತ್ ಕಲಿಕೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಕ್ಷಿತಾಗೆ ನಾಟ್ಯದ ಬಗ್ಗೆ ವಿಶೇಷ ಆಸಕ್ತಿ ರಂಗಪ್ರವೇಶಕ್ಕೆ ಪ್ರೇರೇಪಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net