

ರಾಯಚೂರು: ಆಸ್ತಿಗಾಗಿ ಮಗನನ್ನು ಕೊಲೆ ಮಾಡಿದ ವ್ಯಕ್ತಿಯೊಬ್ಬ ಜೈಲಿನಲ್ಲಿ ಮೃತಪಟ್ಟಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ.
ಹನುಮಂತ (70) ಮೃತಪಟ್ಟ ವ್ಯಕ್ತಿ. ಈತ ಜುಲೈ 28 ರಂದು ತುರ್ವೀಹಾಳದ ಮಲ್ಲದಗುಡ್ಡ ಗ್ರಾಮದಲ್ಲಿ ಈತ ಸ್ವಂತ ಮಗನನ್ನೇ ಕಾಲುವೆಗೆ ನೂಕಿ ಕೊಲೆ ಮಾಡಿದ್ದ. ಇದರಿಂದ ಆತನಿಗೆ ಜೈಲುಶಿಕ್ಷೆಯಾಗಿತ್ತು. ಈತನ ಕೃತ್ಯಕ್ಕೆ 18 ವರ್ಷದ ಮಗ ಭೀಮಣ್ಣ ಕೊಲೆಯಾಗಿದ್ದ.
ಜುಲೈ 29ರಂದು ಪೊಲೀಸರು ಇವನನ್ನು ವಶಕ್ಕೆ ಪಡೆದಿದ್ದು, ಲಿಂಗಸಗೂರು ಜೈಲಿನಲ್ಲಿ ಇಟ್ಟಿದ್ದರು. ಆದರೆ ಜೈಲಿನಲ್ಲಿ ಏಕಾಏಕಿ ಮೃತಪಟ್ಟಿದ್ದಾನೆ. ಈ ಸಾವು ಹೇಗಾಯಿತು ಎಂದು ಇದುವರೆಗೆ ತಿಳಿದಿಲ್ಲ. ಸದ್ಯ ರಾಯಚೂರಿನ ರಿಮ್ಸ್ ಶವಾಗಾರದಲ್ಲಿರುವ ಆರೋಪಿ ಮೃತ ದೇಹ ಇಡಲಾಗಿದೆ.
ಮ್ಯಾಜಿಸ್ಟ್ರೇಟ್ ಮುಂದೆಯೇ ಮರಣೋತ್ತರ ಪರೀಕ್ಷೆ ನಡೆಯಲಿದ್ದು, ನಂತರ ಸಾವಿನ ಕಾರಣ ತಿಳಿಯಲಿದೆ.